ಮೈಸೂರು

ಸಿ ಡಿ ಸಿ/ಹೊರಗುತ್ತಿಗೆ ಡಿ ಗ್ರೂಫ್ ಸಿಬ್ಬಂದಿಗಳಿಗೆ ಕನಿಷ್ಠ ವೇತನ ಮತ್ತು ಇತರೆ ಸೌಲಭ್ಯಗಳನ್ನು ಜಾರಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಅ.9:- ಸಿ ಡಿ ಸಿ/ಹೊರಗುತ್ತಿಗೆ ಡಿ ಗ್ರೂಫ್ ಸಿಬ್ಬಂದಿಗಳಿಗೆ ಕನಿಷ್ಠ ವೇತನ ಮತ್ತು ಇತರೆ ಸೌಲಭ್ಯಗಳನ್ನು ಜಾರಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಕಾಲೇಜುಗಳ ಕಾರ್ಮಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ಮೈಸೂರು ಹುಣಸೂರು ರಸ್ತೆಯಲ್ಲಿರುವ ಉನ್ನತ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿ ಎದುರು ಇಂದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾತನಾಡಿ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ಸಿ ಡಿ ಸಿ, ಗುತ್ತಿಗೆ, ಹೊರಗುತ್ತಿಗೆ ಮತ್ತು ಅನ್ ಸ್ಕಿಲ್ಡ್ ಹೆಸರಿನಲ್ಲಿ ಡಿ ಗ್ರೂಪ್ ಹಾಗೂ ಡೇಟಾ ಎಂಟ್ರಿ ಆಪರೇಟರ್ ಗಳಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರು ಶಾಸನಬದ್ಧವಾಗಿ ಸಿಗಬೇಕಾದ ಕನಿಷ್ಠ ವೇತನವೂ ಇಲ್ಲದೆ ಕಳೆದ 12-15ವರ್ಷಗಳಿಂದಲೂ ಎರಡು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ಸೇವೆಯಲ್ಲಿ ಕಾರ್ಯನಿರತರಾಗಿರುವ ಕಾರ್ಮಿಕರಲ್ಲಿ ಹೆಚ್ಚಿನವರು ಶೋಷಿತ ಸಮುದಾಯದ ಮಹಿಳೆಯರೇ ಆಗಿದ್ದು ತಮ್ಮ ಹಾಗೂ ಕುಟುಂಬಗಳ ನಿರ್ವಹಣೆಗಾಗಿ ಹಲವಾರು ವರ್ಷಗಳಿಂದ ಕೆಲಸವು ಖಾಯಂ ಆಗಬಹುದೆಂಬ ನಿರೀಕ್ಷೆಯಲ್ಲಿ ಕಡಿಮೆ ವೇತನಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಕನಿಷ್ಠ ವೇತನ ನೀಡದೆ 15ವರ್ಷಗಳಿಂದಲೂ ಶೋಷಣೆ ಮಾಡುತ್ತಾ ಬಂದಿರುವುದು ವಿಷಾದನೀಯ ಎಂದರು.
ಇಲಾಖಾ ವ್ಯಾಪ್ತಿಯ ಕಾಲೇಜುಗಳಲ್ಲಿ ನಡೆಯುತ್ತಿರುವ ಅನ್ ಫೇರ್ ಲೇಬರ್ ಪ್ರಾಕ್ಟೀಸ್ ನ್ನು ಕೂಡಲೇ ತಡೆಗಟ್ಟಲು ಸೂಕ್ತ ಕ್ರಮ ವಹಿಸಬೇಕು. ಶಾಸನ ಬದ್ಧವಾಗಿ ಕಾರ್ಮಿಕರಿಗೆ ನೀಡಬೇಕಾದ ಎಲ್ಲಾ ಕನಿಷ್ಠ ಸೌಲಭ್ಯಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು. ಶಾಸನಬದ್ಧವಾಗಿ ನೀಡಬೇಕಾದ ಎಲ್ಲಾ ಕನಿಷ್ಠ ಸೌಲಭ್ಯಗಳನ್ನು ಕೂಡಲೇ ಜಾರಿ ಮಾಡಬೇಕು. ಕಾರ್ಮಿಕ ಇಲಾಖೆಯು 30/12/2017ರಂದು ವೇತನ ಪಾವತಿ ಕುರಿತಂತೆ ಮಾಡಿರುವ ಅಧಿಸೂಚನೆ ಅನ್ವಯ ಇಲ್ಲಿಯವರೆಗಿನ ವ್ಯತ್ಯಾಸದ ಹಿಂಬಾಕಿ ವೇತನವನ್ನು ಪ್ರತಿಯೊಬ್ಬ ಕಾರ್ಮಿಕರಿಗೂ ಪಾವತಿಸಬೇಕು. ಲಾಕ್ ಡೌನ್ ಅವಧಿಯಿಂದ ಅಕ್ಟೋಬರ್ ತಿಂಗಳವರೆಗೂ ವೇತನವನ್ನು ಎಲ್ಲಾ ಕಾರ್ಮಿಕರಿಗೂ ಪಾವತಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಂಚಾಲಕ ಚಂದ್ರಶೇಖರ್ ಮೇಟಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಮುದ್ದುಕೃಷ್ಣ, ಪುಟ್ಟರಾಜು, ಮೀನಾಕ್ಷಿ, ಇಂದಿರ, ವಿನುತಾ, ರೇಖಾ, ಮುರಳೀಧರ್, ನಾಗರತ್ನ, ಲಕ್ಷ್ಮಿ, ಸಂಘದ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: