ಮೈಸೂರು

ಕೆಪಿಸಿಸಿ ಮಾಜಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಹುಟ್ಟುಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಣೆ

ಮೈಸೂರು,ಅ.9:- ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅಭಿಮಾನಿ ಬಳಗದ ವತಿಯಿಂದ ಕೆಪಿಸಿಸಿ ಮಾಜಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಹುಟ್ಟುಹಬ್ಬದ ಅಂಗವಾಗಿ ದೇವರಾಜ ಮಾರುಕಟ್ಟೆ ಮುಂಭಾಗ ಇರುವ ಚಿಕ್ಕ ಗಡಿಯಾರ ಬಳಿ ರಸ್ತೆ ಬದಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ 1000 ಮಾಸ್ಕ್ ನ್ನು ಉಚಿತವಾಗಿ ವಿತರಿಸುವ ಮೂಲಕ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿ ಅರ್ಥಪೂರ್ಣವಾಗಿ ಜನ್ಮ ದಿನಾಚರಣೆ ಆಚರಿಸಲಾಯಿತು.
ಕಾಂಗ್ರೆಸ್ ನಗರಾಧ್ಯಕ್ಷರಾದ ಆರ್. ಮೂರ್ತಿ ಮಾತನಾಡಿ ಕೆಪಿಸಿಸಿ ಮಾಜಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರು ಕರೆ ನೀಡಿದಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಮಾಸ್ಕ್ ವಿತರಣೆ ಹಾಗೂ ಸ್ಯಾನಿಟೈಜರ್ ನೀಡುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದರು.
ಡಾ. ಕೆ ರಘರಾಂ ವಾಜಪೇಯಿ ಮಾತನಾಡಿ ಕೊರೋನಾ ನಿಯಂತ್ರಿಸಲು ನಾಗರೀಕರು ಸರ್ಕಾರದ ಕ್ರಮವನ್ನು ಪಾಲಿಸುತ್ತಿದ್ದರೂ ಸಹ ವೈದ್ಯಕೀಯ ಕ್ಷೇತ್ರ ವ್ಯಾಪಾರೀಕರಣವಾಗಿದೆ. ಬಡವರ್ಗದವರ ಮನೆಯ ಆರ್ಥಿಕ ಪರಿಸ್ಥಿತಿ ನಿರ್ವಹಣೆ ಕಷ್ಟಕರವಾಗಿದೆ. ಇತ್ತ ಸರ್ಕಾರ ಗಮನ ನೀಡಬೇಕು. ಪ್ರತಿ ಮನೆಗೆ ಉಚಿತವಾಗಿ 5ಮಾಸ್ಕ್ ಗಳನ್ನು ನೀಡಲು ಸರ್ಕಾರ ಯೋಜನೆ ರೂಪಿಸಬೇಕು ಎಂದರು.
ಕಾಂಗ್ರೆಸ್ ಯುವ ಮುಖಂಡ ಎನ್.ಎಮ್ ನವೀನ್ ಕುಮಾರ್ ಮಾತನಾಡಿ ದಿನೇಶ್ ಗುಂಡುರಾವ್ ಅವರು ಯುವಸಮೂಹವನ್ನು ಮುಖ್ಯವಾಹಿನಿಗೆ ತರುವುದಕ್ಕೆ ಸಂಘಟನಾತ್ಮಕವಾಗಿ ಶ್ರಮವಹಿಸಿದ್ದಾರೆ, ಇಂದು ಅವರ ಹುಟ್ಟುಹಬ್ಬವನ್ನು ಯಾವುದೇ ದುಂದುವೆಚ್ಚ ಮಾಡದೇ ಸಾರ್ವಜನಿಕರಲ್ಲಿ ಆರೋಗ್ಯದ ಅರಿವು ಮೂಡಿಸಿ ಮಾಸ್ಕ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭ ನಗರ ಪಾಲಿಕೆ ಮಾಜಿ ಸದಸ್ಯರುಗಳಾದ ಪ್ರಶಾಂತ್ ಗೌಡ , ಎಂ ಕೆ ಅಶೋಕ್ , ಗುಂಡೂರಾವ್ ಅಭಿಮಾನಿ ಬಳಗದ ಅಧ್ಯಕ್ಷರಾದ ವಿನಯ್ ಕಣಗಾಲ್ ,ನವೀನ್ ಕೆಂಪಿ ,ಯೋಗೇಶ್ ನಾಯ್ಡು ,ಜೋಗಿ ಸುನಿಲ್ ,ಪೈಲ್ವಾನ್ ಸುನೀಲ್ ,ರಾಜೇಶ್ ,ಕಿರಣ್ ,ಸಿಕಂದರ್ ,ರಾಘವೇಂದ್ರ ,ದೀಪಕ್ ಗೌಡ ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: