ಮೈಸೂರು

ಸಿಎಂ ಯೋಗಿ ಆದಿತ್ಯನಾಥ್ ಆಡಳಿತ ದ ಯುಪಿ ಸರ್ಕಾರ ಮಹಿಳೆಯರಿಗೆ ದುಸ್ವಪ್ನ ವಾಗಿದೆ : ಅಮ್ಜದ್ ಖಾನ್

ಮೈಸೂರು, ಅ.9:- ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳೆಯರ ಗೌರವವನ್ನು ಅಲ್ಲಿ ನಿರ್ಲಕ್ಷಿಸಲಾಗಿದೆ. ಯೋಗಿಯ ಆಳ್ವಿಕೆಯಲ್ಲಿ ಮಹಿಳೆಯರ ವಾಸಕ್ಕೆ ಉತ್ತರ ಪ್ರದೇಶ ಒಂದು ದುಃಸ್ವಪ್ನದ ಸ್ಥಳವಾಗಿ ಮಾರ್ಪಟ್ಟಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಮೈಸೂರು ಜಿಲ್ಲಾ ಘಟಕ ಖಂಡಿಸುತ್ತದೆ ಖಂಡಿಸಿದೆ.
ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾಧ್ಯಕ್ಷ ಅಮ್ಜದ್ಫ್ ಖಾನ್ ಯು.ಪಿ ಯಲ್ಲಿ ಪ್ರತಿ ಎರಡು ಗಂಟೆಗಳಿಗೊಮ್ಮೆ ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದು, ಉತ್ತರ ಪ್ರದೇಶವನ್ನು ಭಾರತದ ಅಪರಾಧಗಳ ರಾಜಧಾನಿಯಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಿದರು.
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕ್ರೂರವಾಗಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ 19 ವರ್ಷದ ದಲಿತ ಹುಡುಗಿ ದೆಹಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ನಿರಂತರ ಅತ್ಯಾಚಾರಗಳ ಸರಣಿಯಲ್ಲಿ ಇದು ಕೊನೆಯದೂ ಆಗಿರುವುದಿಲ್ಲ. ಅಮಾಯಕ ಹುಡುಗಿಯನ್ನು ಕ್ರೂರವಾಗಿ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿದೆ. ಹುಡುಗಿಯ ಕತ್ತು ಹಿಸುಕಿ ಅವಳ ನಾಲಿಗೆಯನ್ನು ಕತ್ತರಿಸಲಾಗಿದ್ದು, ಅವಳ ಬೆನ್ನುಮೂಳೆಯನ್ನು ಮುರಿಯಲಾಗಿದೆ. ಎರಡು ವಾರಗಳ ಕಾಲ ಜೀವನ್ಮರಣದ ನಡುವೆ ಹೋರಾಡಿದ ಆಕೆ ಕೊನೆಗೂ ದೆಹಲಿಯ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ. ಹುಡುಗಿಯ ಸಾವಿನ 24 ಗಂಟೆ ಕಳೆಯುವ ಮೊದಲೇ, ಉತ್ತರ ಪ್ರದೇಶದ ಹಮೀರ್ ಪುರದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ದಲಿತ ಮಹಿಳೆಯ ತೊಡೆಗೆ ಬೂಟಿನಿಂದ ತುಳಿಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದಲ್ಲಿ ಮಾನವೀಯತೆ ಅಕ್ಷರಶಃ ಸತ್ತು ಹೋಗಿದೆ. ಕೇಸರಿ ವಸ್ತ್ರಧಾರಿ ನಿರ್ದಯಿ ಸನ್ಯಾಸಿಯ ಆಳ್ವಿಕೆಯಲ್ಲಿ ಕ್ರೌರ್ಯವೇ ರಾಜ್ಯದ ವಿಶಿಷ್ಟ ಲಕ್ಷಣವಾಗಿದೆ. ಯೋಗಿ ಆದಿತ್ಯನಾಥ್, ರಾಜ್ಯ ಮತ್ತು ದೇಶ ಮಾತ್ರವಲ್ಲ ಸನಾತನ ಧರ್ಮಕ್ಕೂ ಕಳಂಕಿತರಾಗಿದ್ದಾರೆ. ಮುಸ್ಲಿಂ ಮಹಿಳೆಯರನ್ನು ಗೋರಿಗಳಿಂದ ಹೊರತೆಗೆದು ಅತ್ಯಾಚಾರವೆಸಗಿ ಎಂದು ಕರೆ ನೀಡಿದ್ದ ಧರ್ಮಾಂಧತೆ ತುಂಬಿದ ಮನುಷ್ಯನಿಂದ ಯಾವುದೇ ರೀತಿಯ ಮಾನವೀಯತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದುದರಿಂದ ಇತಂಹ ಮನುವಾದಿಗಳನ್ನು ಅಧಿಕಾರದಿಂದ ದೂರ ಇಡ ಬೇಕು ಎಂದರು.

ಜಂಗಲ್ ರಾಜ್ ಎಂಬ ಪದವು ಉತ್ತರ ಪ್ರದೇಶಕ್ಕೆ ಹೆಚ್ಚು ಸೂಕ್ತವೆನಿಸುತ್ತದೆ. ಯಾವುದೇ ನೈತಿಕತೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳು ಅಥವಾ ಮಾನವೀಯತೆಗೆ ಅಲ್ಲಿ ಗೌರವವಿಲ್ಲದಂತಾಗಿದೆ.ಈ ಕ್ರೂರ ಘಟನೆಯ ದುಃಖಕರ ಮತ್ತು ಬೇಸರದ ಸಂಗತಿಯೆಂದರೆ, ಹತ್ರಾಸ್ ಹುಡುಗಿಯನ್ನು ಹತ್ಯೆ ಮಾಡಿದ ರೀತಿಯಲ್ಲಿಯೇ ಕೊಲೆಯಾದ ನಿರ್ಭಯಳಿಗೆ ನ್ಯಾಯ ಕೋರಿ ಬೀದಿಗಿಳಿದ ದೇಶದ ಸಾಮೂಹಿಕ ಪ್ರಜ್ಞೆಯಿಂದ ಈಗ ಅಂತಹ ಯಾವುದೇ ಆಕ್ರೋಶ ವ್ಯಕ್ತವಾಗಲಿಲ್ಲ. ಅತ್ಯಾಚಾರ ಮತ್ತು ಕಿರುಕುಳಕ್ಕೆ ಬಲಿಯಾದವರನ್ನು ಅವರ ಸ್ಥಾನಮಾನ, ಜಾತಿ ನೋಡಿ ಪರಿಗಣಿಸಲಾಗುತ್ತದೆ ಎಂಬುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಡಿ ಕಾರಿದರು
ಪ್ರತಿಭಟನೆಯಲ್ಲಿ ದೇವನೂರು ಪುಟ್ಟ ನಂಜಯ್ಯ ,ಎಸ್.ಡಿ.ಪಿ.ಐ ರಾಜ್ಯ ಉಪಾಧ್ಯಕ್ಷ,ಕುಮಾರಸ್ವಾಮಿ.
ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ, ಜ್ಞಾನ ಪ್ರಕಾಶ ಸ್ವಾಮೀಜಿಯವರು,ಉರಿಲಿಂಗಪೆದ್ದಿ ಮಠ ಮೈಸೂರು.ಮೌಲಾನ ಇಸ್ಮಾಯಿಲ್, ಅಧ್ಯಕ್ಷರು
ಆಲ್ ಇಂಡಿಯಾ ಈಮಾಮ್ಸ್ ಕೌನ್ಸಿಲ್, ಪುರುಷೋತ್ತಮ್ ಮಾಜಿ ಮಹಾಪೌರರು, ಮೊಮ್ಮದ್ ಸಫಿ ಜಿಲ್ಲಾಧ್ಯಕ್ಷರು ಪಿಎಫ್ಐ. ಚೋರನಹಳ್ಳಿ ಶಿವಣ್ಣ ಸಂಚಾಲಕರು ಡಿ.ಎಸ್.ಎಸ್.ದೇವರಾಜ ನಾಯಕ ಕಾಟೂರು.
ಅಧ್ಯಕ್ಷರು ಮತ್ತಿತರರು ರಾಜ್ಯ ನಾಯಕ ಜನಾಂಗದ ಯುವ ವೇದಿಕೆ ಮತ್ತಿತರರು ಪಾಲ್ಗೊಂಡಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: