ಪ್ರಮುಖ ಸುದ್ದಿವಿದೇಶ

ವಿಶ್ವ ಆಹಾರ ಯೋಜನೆಗೆ ನೊಬೆಲ್ ಶಾಂತಿ ಪ್ರಶಸ್ತಿ

ನಾರ್ವೆ,ಅ.9- ಹಸಿವನ್ನು ನೀಗಿಸಲು ಪ್ರಯತ್ನಿಸುತ್ತಿರುವ ವಿಶ್ವ ಆಹಾರ ಕಾರ್ಯಕ್ರಮಕ್ಕೆ 2020ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ ನೀಡಲು ನಾರ್ವೆಯ ನೊಬೆಲ್ ಸಮಿತಿ ನಿರ್ಧರಿಸಿದೆ.

ವಿಶ್ವ ಸಂಸ್ಥೆಯ ಭಾಗವಾಗಿರುವ ವಿಶ್ವ ಆಹಾರ ಯೋಜನೆ (ಡಬ್ಲ್ಯುಎಫ್‌ಪಿ) ಹಸಿವು ನೀಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು, ಪ್ರಯತ್ನಗಳನ್ನು ಪರಿಗಣಿಸಿ ನೊಬೆಲ್ ಸಮಿತಿಯು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಘರ್ಷಣೆ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಸಂಸ್ಥೆ ಶ್ರಮಿಸಿದೆ ಹಾಗೂ ಹಸಿವನ್ನು ಯುದ್ಧಕ್ಕೆ ಅಸ್ತ್ರವಾಗಿ ಬಳಸುವುದನ್ನು ತಪ್ಪಿಸುವ ಪ್ರಯತ್ನಗಳನ್ನು ಮಾಡಿದೆ.

ಈ ಬಾರಿ ನೊಬೆಲ್‌ ಶಾಂತಿ ಪ್ರಶಸ್ತಿಗೆ 211 ವ್ಯಕ್ತಿಗಳು ಹಾಗೂ 107 ಸಂಸ್ಥೆಗಳು ನಾಮ ನಿರ್ದೇಶನವಾಗಿದ್ದವು. ಪ್ರಶಸ್ತಿಯು 10 ಮಿಲಿಯನ್‌ ಕ್ರೋನಾ (ಅಂದಾಜು 8 ಕೋಟಿ ರೂ.) ನಗದು ಬಹುಮಾನ ಮತ್ತು ಚಿನ್ನದ ಪದವನ್ನು ಒಳಗೊಂಡಿರಲಿದೆ. ಡಿಸೆಂಬರ್‌ 10ರಂದು ನಾರ್ವೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: