ಪ್ರಮುಖ ಸುದ್ದಿ

ದೇಶದಲ್ಲಿ 70ಲಕ್ಷ ತಲುಪಿದ ಕೊರೋನಾ ಸೋಂಕಿತರ ಸಂಖ್ಯೆ : 24ಗಂಟೆಯಲ್ಲಿ 73ಸಾವಿರ ಹೊಸ ಪ್ರಕರಣ

ದೇಶ(ನವದೆಹಲಿ)ಅ.10:- ದೇಶದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 70ಲಕ್ಷ ತಲುಪಿದೆ. ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಳದೊಂದಿಗೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಸೋಂಕುಗಳಿಂದ ಚೇತರಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ 73,272 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿದ್ದು, 82,753 ಸೋಂಕಿತರು ಗುಣಮುಖರಾಗಿದ್ದಾರೆ. 926 ಸೋಂಕಿತರು ಸಾವನ್ನಪ್ಪಿದ್ದಾರೆ.
ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ ಈಗ 69 ಲಕ್ಷ 79 ಸಾವಿರಕ್ಕೆ ತಲುಪಿದೆ. ಈ ಪೈಕಿ ಒಂದು ಲಕ್ಷ 7 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 8 ಲಕ್ಷ 83 ಸಾವಿರಕ್ಕೆ ಇಳಿದಿದ್ದು, ಒಟ್ಟು 59 ಲಕ್ಷ 88 ಸಾವಿರ ಮಂದಿ ಗುಣಮುಖರಾಗಿದ್ದಾರೆ. ಗುಣಮುಖರಾಗುವವರ ಸಂಖ್ಯೆ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆಗಿಂತ ಆರು ಪಟ್ಟು ಹೆಚ್ಚಾಗಿದೆ. ಹೊಸ ಕೊರೋನಾ ಪ್ರಕರಣಗಳಿಗಿಂತ ದೇಶದಲ್ಲಿ ಸತತ ಮೂರು ವಾರಗಳಿಗಿಂತ ಹೆಚ್ಚು ಹೊಸ ಚೇತರಿಕೆ ಪ್ರಕರಣಗಳ ಸಂಖ್ಯೆ ಕಂಡು ಬಂದಿದೆ.
ಐಸಿಎಂಆರ್ ಪ್ರಕಾರ, ಅಕ್ಟೋಬರ್ 9 ರವರೆಗೆ ಒಟ್ಟು 8 ಕೋಟಿ 57 ಲಕ್ಷ ಮಾದರಿ ಪರೀಕ್ಷೆಗಳನ್ನು ಮಾಡಲಾಗಿದ್ದು, ಈ ಪೈಕಿ 11 ಲಕ್ಷ 64 ಸಾವಿರ ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಗಿದೆ. ಸಕಾರಾತ್ಮಕ ದರವು ಏಳು ಪ್ರತಿಶತದಷ್ಟಿದೆ.
ಮಹಾರಾಷ್ಟ್ರವು ದೇಶದಲ್ಲಿ ಹೆಚ್ಚು ಸಕ್ರಿಯವಾಗಿರುವ ಪ್ರಕರಣಗಳನ್ನು ಹೊಂದಿದೆ. ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಉತ್ತರ ಪ್ರದೇಶ ಮಹಾರಾಷ್ಟ್ರದ ನಂತರ ಹೆಚ್ಚು ಸಕ್ರಿಯ ಪ್ರಕರಣ ಹೊಂದಿದೆ. ಸಕ್ರಿಯ ಪ್ರಕರಣದಲ್ಲಿ ಭಾರತ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಭಾರತವು ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ.
ಮರಣ ಪ್ರಮಾಣ ಮತ್ತು ಸಕ್ರಿಯ ಪ್ರಕರಣಗಳ ದರದಲ್ಲಿ ಸ್ಥಿರವಾದ ಕುಸಿತ ದಾಖಲಾಗುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ. ಸಾವಿನ ಪ್ರಮಾಣ 1.53% ಕ್ಕೆ ಇಳಿದಿದೆ. ಇದಲ್ಲದೆ, ಚಿಕಿತ್ಸೆಗೆ ಒಳಪಡುವ ಸಕ್ರಿಯ ಪ್ರಕರಣಗಳ ಪ್ರಮಾಣವೂ 13% ಕ್ಕೆ ಇಳಿದಿದೆ. ಇದರೊಂದಿಗೆ, ಚೇತರಿಕೆ ಪ್ರಮಾಣ 86% ಆಗಿದೆ. ಭಾರತದಲ್ಲಿ ಚೇತರಿಕೆ ಪ್ರಮಾಣ ನಿರಂತರವಾಗಿ ಹೆಚ್ಚುತ್ತಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: