ಮೈಸೂರು

ಮೂಲಭೂತ ಸೌಕರ್ಯ ಕಾಣದ ಕೆಂಪೇಗೌಡನಕೊಪ್ಪಲು ಗ್ರಾಮ : ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ

ಮೈಸೂರು,ಅ.10:- ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಕೆಂಪೇಗೌಡನಕೊಪ್ಪಲು ಗ್ರಾಮ ಮೂಲಭೂತ ಸೌಕರ್ಯಗಳನ್ನೇ ಕಂಡಿಲ್ಲ.
ವರ್ಷಗಳೇ ಕಳೆದರು ಗ್ರಾಮಕ್ಕೆ ಚರಂಡಿ ಮತ್ತು ಕಾಂಕ್ರೀಟ್ ರಸ್ತೆ ಭಾಗ್ಯ ಲಭಿಸಿಲ್ಲ. ರಸ್ತೆ ತುಂಬೆಲ್ಲ ಮಳೆ ನೀರು ನಿಂತಿದ್ದು, ಮಳೆ ನೀರು ನಿಂತ ರಸ್ತೆಯಲ್ಲಿ ಸಾಗಲು ವಾಹನ ಸವಾರರು ಹರಸಾಹಸ ಪಡಬೇಕು. ನೀರಿನ ಟ್ಯಾಂಕ್ ಅಂತೂ ಸ್ವಚ್ಛತೆಯನ್ನೇ ಕಂಡಿಲ್ಲ. ಗ್ರಾಮದ ಪರಿಸ್ಥಿತಿ ಕಂಡು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಮುಖಂಡ ಚುಂಚೇಗೌಡ. ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕ ವರ್ಷಗಳಿಂದ ನಮ್ಮ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಜನರು ಕುಡಿಯುವ ನೀರಿನ ಟ್ಯಾಂಕ್ ಕೂಡ ಶುದ್ಧವಾಗಿಲ್ಲ. ಮಳೆಗಾಲದಲ್ಲಿ ಕೆಲ ಚರಂಡಿಗಳು ತುಂಬಿ ದುರ್ವಾಸನೇ ಬರುತ್ತಿದೆ. ಗ್ರಾಮದ ನೈಜ ಪರಿಸ್ಥಿತಿ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದೇ ರೀತಿ ನಮ್ಮ ಗ್ರಾಮವನ್ನು ನಿರ್ಲಕ್ಷ್ಯಿಸಿದರೆ ಮುಂಬರುವ ಗ್ರಾಪಂ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: