ಮೈಸೂರು

ವಿಧಾನಸೌಧದಲ್ಲಿ ನಿಮ್ಮ ಮಾತಿಗೆ ಬೆಲೆ ಇದೆಯೇ ಸಿಎಂಗೆ ಯಡಿಯೂರಪ್ಪ ಪ್ರಶ್ನೆ

ನಂಜನಗೂಡು ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ಬಿಜೆಪಿಯಿಂದ ಬಹಿರಂಗ ಸಭೆ ನಡೆಯಿತು.ಬಿಜೆಪಿಯ  ನಾಯಕರು ಬಹಿರಂಗ ಸಭೆಯಲ್ಲಿ ಭಾಗಿಯಾಗಿದ್ದರು.
ಬಹಿರಂಗ ಸಭೆಗೆ ಚಾಲನೆ  ಯಡಿಯೂರಪ್ಪ ಚಾಲನೆ ನೀಡಿದರು. ಸಭೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು.ದಲಿತರು, ಹಿಂದುಳಿದ ಸಮುದಾಯದವರಿಗೆ ಸಿದ್ದರಾಮಯ್ಯ ಟೋಪಿ ಹಾಕಿದ್ದಾರೆ.ಸಿದ್ದರಾಮಯ್ಯ ಅವರು ದಲಿತರಿಗೆ ಹೆಚ್ಚು ಕೆಲಸ ಮಾಡಿದರು ಅಂತ ಸಚಿವ ಆಂಜನೇಯ ಕೋಟ್ ಹಾಕಿ ಸನ್ಮಾನ ಮಾಡಿದರು. ಸಮಾಜಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ ಹಾಸಿಗೆ ಬಿಂದು ಹಗರಣದಲ್ಲಿ ಆಂಜನೇಯ ಹಣ ಹೊಡೆದಿದ್ದಾರೆ.ಈ ಕೆಲಸ ಮಾಡಿರೋ  ನಿಮ್ಮ ಮಕ್ಕಳ ಮರಿಗೆ ಒಳ್ಳೆಯದಾಗುತ್ತಾ? ಎಂದು ಸಚಿವ ಆಂಜನೇಯ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಬಹಿರಂಗ ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ ಸಿದ್ದರಾಮಯ್ಯ ಅವರು 12 ಬಾರಿ ಬಜೆಟ್ ಮಂಡಿಸಿದ್ದಾರೆ.ಕಳೆದ ನಾಲ್ಕು ವರ್ಷಗಳಲ್ಲಿ ನೀವು ಮಾಡಿದ್ದೇನು?
ಮೈಸೂರು ಜಿಲ್ಲೆಗೆ ಕೊಟ್ಟ ಕೊಡುಗೆ ಏನು ಎಂದು ಪ್ರಶ್ನಿಸಿದರು. ಸಾಹುಕಾರ ಚೆನ್ನಯ್ಯ ಚಾವಡಿಯಲ್ಲಿ ಹಣ ಹಂಚಿದ್ದೀರಿ. ಇಮ್ರಾನ್ ಎಂಬುವರ ಮನೆಯಲ್ಲಿ ಸಂಸದ ದೃವನಾರಾಯಣ್ ಹಣ ಹಂಚಿದ್ದಾರೆ.ನಿನ್ನೆ ರಾತ್ರಿ ಮತದಾರರಿಗೆ ಹಣ ಹಂಚಿದ್ದಾರೆ.
ಅಕ್ರಮದಿಂದ ಚುನಾವಣೆ ಗೆಲ್ಲೋಕೆ ಸಿಎಂ ಹೊರಟಿದ್ದಾರೆ. ನಿಮ್ಮವರ ಕಾರು ಬಂದ್ರೆ ಪೊಲೀಸರು ಸೆಲ್ಯೂಟ್ ಹೊಡಿತಾರೆ.ನಮ್ಮವರು ಬಂದರೆ ಕರಪತ್ರವನ್ನೇ ಹರಿದು ಹಾಕ್ತಾರೆ.
ಎಂದು ತೀವ್ರ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಮಾತನಾಡಿ ನಾಳೆ ಸಂಜೆ ಕ್ಷೇತ್ರದಿಂದ ಹೊರಡುತ್ತೇವೆ.ಚುನಾವಣೆ ಗೆದ್ದ ಬಳಿಕ ಮತ್ತೆ ಬರುತ್ತೇವೆ.ಎಲ್ಲ ಆರು ಜಿ.ಪಂ ಕ್ಷೇತ್ರಗಳಲ್ಲಿ ವಿಜಯೋತ್ಸವ ಆಚರಣೆ ಮಾಡುತ್ತೇವೆ. ಸಿದ್ದರಾಮಯ್ಯ ಸರ್ಕಾರದ ಖಜಾನೆ ಲೂಟಿ ಮಾಡಿದ್ದಾರೆ.ಚುನಾವಣೆ ಗೆಲ್ಲೋಕೆ ಹಣ ಹಂಚುತ್ತಿದ್ದಾರೆ.ಇದನ್ನ ಮೀರಿ ನೀವು ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು.ಆಡಳಿತ ನಡೆಸುವ ಯೋಗ್ಯತೆ ನಿಮಗಿಲ್ಲ.ಹಣದ ಧಿಮಾಕಿನಿಂದ,ಮದದಿಂದ ಓಡಾಡುತ್ತಿದ್ದೀರಿ.ಸಿದ್ದರಾಮಯ್ಯನವರಿಗೆ ಜನ ಪಾಠಕಲಿಸಬೇಕಿದೆ.ದಲಿತರಿಗೆ ಮೀಸಲಿಟ್ಟ ಹಣ ಖರ್ಚಾಗಿಲ್ಲ. ವಿಧಾನಸೌಧದಲ್ಲಿ ನಿಮ್ಮ ಮಾತಿಗೆ ಬೆಲೆ ಇದೆಯೇ,ಅಧಿಕಾರಿಗಳು ನಿಮ್ಮ ಮಾತು ಕೇಳುತ್ತಿದ್ದಾರಾ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ,  ಶ್ರೀರಾಮುಲು, ಪ್ರತಾಪ ಸಿಂಹ, ವಿ.ಸೋಮಣ್ಣ, ಸಿ.ಎಂ.ಉದಾಸಿ, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: