ಮೈಸೂರು

ಕೊರೋನಾ ಭಯವಿಲ್ಲದೆ ಸಾಮಾಜಿಕ ಅಂತರ ಮರೆತು ಬೇಜವಾಬ್ದಾರಿ ವರ್ತನೆ : ಕ್ರಮ ಕೈಗೊಳ್ಳುವವರಾರು?


ಮೈಸೂರು,ಅ.10:- ಮೈಸೂರಿನಲ್ಲಿ ಕೊರೋನಾ ವೈರಸ್ ಸೋಂಕು ಮಾಯವಾಗಿದೆ. ಹೀಗೆಂದು ನಾವು ಹೇಳುತ್ತಿಲ್ಲ, ಜನತೆ ಆ ರೀತಿ ವರ್ತಿಸುತ್ತಿದ್ದಾರೆ. ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಗಾಯನ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಅಲ್ಲಿ ನೋಡಿದರೆ ಜಾತ್ರೆ ನಡೆದಿದೆಯೆನೋ ಎಂಬಂತೆ ಭಾಸವಾಗುತ್ತಿದೆ. ಯಾವ ಸಾಮಾಜಿಕ ಅಂತರವೂ ಇಲ್ಲ, ಮಾಸ್ಕ್ ಅಂತೂ ಕೆಲವರು ಧರಿಸಿದ್ದರೆ ಇನ್ಕೆಲವರು ಗಡ್ಡದ ಮೇಲೆ ಮಾಸ್ಕ್ ಧರಿಸಿದ್ದಾರೆ.
ಚಾಮುಂಡಿಪುರಂ ವೃತ್ತದಲ್ಲಿ ಕಾರ್ಯಕ್ರಮ ನಡೆಸುವ ಸಲುವಾಗಿ ರಸ್ತೆಯನ್ನು ಸಹ ಬಂದ್ ಮಾಡಿಸಲಾಗಿದೆ. ಪೊಲೀಸರ ಬಳಿ ಏನು ಕಾರ್ಯಕ್ರಮ ನಡೆಯುತ್ತಿದೆ ಎಂದು ಕೇಳಿದರೆ ನಮಗೆ ಗೊತ್ತಿಲ್ಲ, ನಮಗೆ ಈ ಕುರಿತು ಮಾಹಿತಿ ಇಲ್ಲ ಎಂದಿದ್ದಾರೆ. ಜಿಲ್ಲಾಧಿಕಾರಿಯವರು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಬಳಿ ಎರಡು ವಾರ ಸಮಯ ಕೊಡಿ ಸರ್, ಕೊರೋನಾ ನಿಯಂತ್ರಣ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಜನತೆ ತಮ್ಮ ಜವಾಬ್ದಾರಿ ಸ್ವಲ್ಪವೂ ಇಲ್ಲ ಎಂಬಂತೆ ವರ್ತಿಸಿದರೆ ಹೇಗೆ? ಮಾಸ್ಕ್ ಧರಿಸದಿದ್ದಲ್ಲಿ ದಂಡ ವಿಧಿಸುವ ಪೊಲೀಸರು ಇಷ್ಟೊಂದು ಜನರು ಗುಂಪು ಗುಂಪಾಗಿ ಸೇರಿರುವಾಗ ಯಾವುದೇ ಕ್ರಮಕ್ಕೆ ಮುಂದಾಗದೇ ಸುಮ್ಮನೆ ಇರುವುದು ಯಾಕೆ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಗಾಯಕರಿಗೆ ನುಡಿನಮನ ಸಲ್ಲಿಸುವುದು ಸರಿ, ಅದಕ್ಕೆ ಯಾರದೂ ಆಕ್ಷೇಪಣೆ ಇಲ್ಲ, ಕೊರೋನಾ ಸಮಯದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಜನರನ್ನು ಗುಂಪುಗೂಡಿಸಿ ಕಾರ್ಯಕ್ರಮ ನಡೆಸುವುದು ಎಷ್ಟು ಸರಿ ಎಂಬ ಪ್ರಶ್ನೆಗಳೆದ್ದಿದೆ. ಮೈಸೂರಿನಲ್ಲಿ ಕೊರೋನಾ ವೈರಸ್ ಸೋಂಕು ಹೆಚ್ಚುತ್ತಿರುವ ಸಂದರ್ಭ ಈ ರೀತಿ ಸಾರ್ವಜನಿಕರು ಯಾವುದೇ ಎಚ್ಚರಿಕೆಯಿಲ್ಲದೆ ಬೇಜಾವಾಬ್ದಾರಿಯುತವಾಗಿ ವರ್ತಿಸಿರುವುದು ಮಾತ್ರ ಸ್ವಲ್ಪವೂ ಸರಿ ಇಲ್ಲ ಎಂಬ ಮಾತುಗಳು ಕೆಲವರಿಂದ ಕೇಳಿ ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: