ಕರ್ನಾಟಕಮೈಸೂರು

ಸಂಸದ ಪ್ರತಾಪ್ ಸಿಂಹ ಕ್ಷೇತ್ರದ ಜನರಿಂದ ದೂರ: ಆರೋಪ

ಸಂಸದ ಪ್ರತಾಪ್ ಸಿಂಹ ಅವರು ಕ್ಷೇತ್ರದ ಜನರಿಂದ ದೂರ ಸರಿದು ಟಿಪ್ಪು ಜಯಂತಿಯ ಹೆಸರಿನಲ್ಲಿ ಮುಗ್ಧರನ್ನು ಎತ್ತಿಕಟ್ಟಿ ರಾಜಕೀಯ ಮಾಡುತ್ತಿದ್ದಾರೆ ಎಂದು ದಲಿತ-ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮನ್ವಯ ವೇದಿಕೆಯ ರಾಜ್ಯಾಧ್ಯಕ್ಷ ದೇವಪ್ಪನಾಯಕ ದೂರಿದ್ದಾರೆ.

ಅವರು ನಗರದ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ನಾಡು ಕಟ್ಟಿದ್ದ ಮೂಲ ನಾಗಾ(ದಲಿತ)ಗಳ ಮೇಲೆ ಧರ್ಮ, ಸಂಸ್ಕೃತಿ, ಆಹಾರಗಳ ಹೆಸರಿನಲ್ಲಿ ನಡೆಯುತ್ತಿರುವ ದಾಳಿಯನ್ನು ಖಂಡಿಸದೆ ಮತಬ್ಯಾಂಕ್ ರಾಜಕಾರಣಕ್ಕಾಗಿಯೇ ಬಾಬಾ ಸಾಹೇಬ್ ಡಾ.ಬಿ.ಆರ್.ಆಂಬೇಡ್ಕರ್ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಕರೆ ನೀಡಿರುವ ಸಂಸದರು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ. ಈ ಕುತಂತ್ರ ರಾಜಕಾರಣವನ್ನು ಬದಿಗೊತ್ತಿ ಸಮಾಜಮುಖಿಯಾಗಬೇಕು, ಕಾವೇರಿ ನದಿ ನೀರಿನ ವಿವಾದದಲ್ಲಿ ಬಿಜೆಪಿಯ ನಿಜ ಬಣ್ಣ ಬಯಲು ಮಾಡಿಕೊಂಡಿದೆ. ದೇಶ-ನೆಲ-ಜಲ ಸಮಸ್ಯೆಗಿಂತ ರಾಜಕೀಯ ದಾಳ ನಡೆಸುವುದು ಖಂಡನೀಯವೆಂದು ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಬಿಳಿಕೆರೆ ಕಾಂಗ್ರೆಸ್ ಮುಖಂಡ ಬಸವರಾಜು ದ.ಹಿಂ.ಅ.ಸ. ವೇದಿಕೆಯ ಗೌರವಾಧ್ಯಕ್ಷ ಹರಿಹರ ಅನಂದಸ್ವಾಮಿ, ಅಧ್ಯಕ್ಷ ಕೆ.ವಿ.ದೇವೇಂದ್ರ, ಉಪಾಧ್ಯಕ್ಷ ಸೋಮಯ್ಯ ಮಲೆಯೂರು, ಕರ್ನಾಟಕ ಲ್ಯಾಂಪ್ಸ್ ಮಹಾಮಂಡಳದ ಕೃಷ್ಣಯ್ಯ ಹಾಗೂ ಬಿ.ರಾಚಯ್ಯ ಉಪಸ್ಥಿತರಿದ್ದರು.

Leave a Reply

comments

Tags

Related Articles

error: