ಮೈಸೂರು

ದ್ವಿಚಕ್ರ ವಾಹನದಲ್ಲಿ ಅಡಗಿದ್ದ ಹಾವನ್ನು ರಕ್ಷಿಸಿದ ಸೂರ್ಯಕೀರ್ತಿ

ಮೈಸೂರು,ಅ.11:- ದ್ವಿಚಕ್ರ ವಾಹನದಲ್ಲಿ ಅಡಗಿದ್ದ ಹಾವನ್ನು ಖ್ಯಾತ ಉರಗ ತಜ್ಞ ಸ್ನೇಕ್ ಶಾಮ್ ಅವರ ಪುತ್ರ ಸೂರ್ಯಕೀರ್ತಿ ರಕ್ಷಣೆ ಮಾಡಿದ್ದಾರೆ.

ಮೈಸೂರಿನ ಕೆ‌. ಆರ್‌‌.ಎಸ್ ಮುಖ್ಯರಸ್ತೆಯಲ್ಲಿರುವ ಆದಿತ್ಯ ಪೆಟ್ರೋಲ್ ಬಂಕ್ ಬಳಿ ದ್ವಿಚಕ್ರವಾಹನದಲ್ಲಿ ಅಡಗಿದ್ದ ಹಾವನ್ನು ಸ್ನೇಕ್ ಶಾಮ್ ಅವರ ಪುತ್ರ ಸೂರ್ಯ ಕೀರ್ತಿ ರಕ್ಷಣೆ ಮಾಡಿದ್ದಾರೆ. ಆದಿತ್ಯ ಪೆಟ್ರೋಲ್ ಬಂಕ್ ಬಳಿ ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ ಹಾವು ಸೇರಿಕೊಂಡಿತ್ತು. ಈ ವೇಳೆ ಹಾವನ್ನು ಕಂಡು ಬೈಕ್ ಸವಾರ ಹೌಹಾರಿದ್ದು, ಕೂಡಲೇ ಸಾರ್ವಜನಿಕರು ಉರಗ ರಕ್ಷಕ ಸೂರ್ಯ ಕೀರ್ತಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಸೂರ್ಯಕೀರ್ತಿ ಪೆಟ್ರೋಲ್ ಟ್ಯಾಂಕ್ ನ ಕೆಳಗೆ ಅಡಗಿದ್ದ ಹಾವನ್ನು ಸುರಕ್ಷಿತವಾಗಿ ರಕ್ಷಿಸಿದರು. ರಕ್ಷಣೆ ಮಾಡಿದ ಹಾವು ಆಭರಣದ ಹಾವಾಗಿದ್ದು, ಹೆಚ್ಚು ವಿಷಕಾರಿಯಲ್ಲ ಎಂದು ಸೂರ್ಯ ಕೀರ್ತಿ ತಿಳಿಸಿದರು.

ತಂದೆಯಿಂದಲೇ ಹಾವುಗಳ ರಕ್ಷಣೆ ಮಾಡುವುದನ್ನು ಕರಗತ ಮಾಡಿಕೊಂಡಿರುವ ಸೂರ್ಯ ಕೀರ್ತಿ ಕೂಡ ಇದೀಗ ಜನವಸತಿ ಪ್ರದೇಶಗಳತ್ತ ಬರುವ ಹಾವುಗಳನ್ನು ರಕ್ಷಣೆ ಮಾಡಿ ಸುರಕ್ಷಿತ ಪ್ರದೇಶಗಳಲ್ಲಿ ಬಿಡುವುದರಲ್ಲಿ ಪರಿಣಿತರಾಗಿದ್ದಾರೆ. ದಯವಿಟ್ಟು ಹಾವುಗಳನ್ನು ಕೊಲ್ಲಬೇಡಿ, ನನಗೆ ಕರೆ ಮಾಡಿದರೆ ತಕ್ಷಣ ಬಂದು ಸಂರಕ್ಷಣೆ ಮಾಡುತ್ತೇನೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: