ಮೈಸೂರು

ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಕೊರೋನಾದಿಂದ ಗುಣಮುಖ : ಹರಕೆ ತೀರಿಸಿದ ಅಭಿಮಾನಿಗಳು

ಮೈಸೂರು,ಅ.12:- ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಅವರು ಕೊರೋನಾದಿಂದ ಗುಣಮುಖರಾದ ಹಿನ್ನೆಲೆ ಕೋಟೆ ಶಿವಣ್ಣ ಅವರ ಅಭಿಮಾನಿಗಳು 101 ತೆಂಗಿನ ಕಾಯಿ ಒಡೆದು ಹರಕೆ ತೀರಿಸಿದರು.

ಮೈಸೂರಿನ ಅರಮನೆ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ತೆಂಗಿನ ಕಾಯಿ ಒಡೆದರು. ಮೇಟಗಳ್ಳಿಯ ಯಜಮಾನರುಗಳಾದ ದಾಸು, ಕರಿಯಪ್ಪ ಮತ್ತು ಪ್ರಕಾಶ್ ಅವರ ನೇತೃತ್ವದಲ್ಲಿ‌ ಕಾರ್ಯಕ್ರಮ ನಡೆದಿದ್ದು, ಕಳೆದ ಕೆಲವು ದಿನಗಳಿಂದ ಕೊರೋನಾದಿಂದ ಎಂ.ಶಿವಣ್ಣ ಬಳಲುತ್ತಿದ್ದರು. ಶಿವಣ್ಣ ಅವರು ಗುಣಮುಖರಾಗಲೆಂದು ಪ್ರಾರ್ಥಿಸಿ ಕೋಟೆ ಆಂಜನೇಯಸ್ವಾಮಿಗೆ ಅಭಿಮಾನಿಗಳು ಹರಕೆಹೊತ್ತಿದ್ದರು. ಇದೀಗ ಕೊರೋನಾ ಮುಕ್ತರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹಿನ್ನೆಲೆಯಲ್ಲಿ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: