ಪ್ರಮುಖ ಸುದ್ದಿ

ಕೊರೋನಾ ಪ್ರಯುಕ್ತ ನೀಟ್ ಪರೀಕ್ಷೆ ಹಾಜರಾಗದವರಿಗೆ ಅ.14ರಂದು ಪರೀಕ್ಷೆ ನಡೆಸಲು ಸುಪ್ರೀಂ ಸೂಚನೆ

ದೇಶ(ನವದೆಹಲಿ)ಅ.13:- ಕೊರೊನಾ ಕಾರಣದಿಂದ NEET ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಸುಪ್ರೀಂಕೋರ್ಟ್ ಮತ್ತೊಂದು ಅವಕಾಶ ನೀಡಿದ್ದು, ಅಕ್ಟೋಬರ್ 14 ರಂದು ಮತ್ತೊಮ್ಮೆ NEET ಪರೀಕ್ಷೆ ನಡೆಸಲು ಅನುಮತಿ ನೀಡಿದೆ.
ಕೊರೊನಾ ಸೋಂಕಿನ ಭೀತಿಯಿಂದ ಕಂಟೈನ್ಮೆಂಟ್ ವಲಯದಲ್ಲಿ ವಾಸ ಮಾಡುತ್ತಿದ್ದ ಅನೇಕ ವಿದ್ಯಾರ್ಥಿಗಳು ಸೆಪ್ಟೆಂಬರ್ ನಲ್ಲಿ ನಡೆದ ನೀಟ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ನಡಸುವುದಕ್ಕೆ ಮತ್ತೆ ಅವಕಾಶ ನೀಡಿದೆ.

ವಿದ್ಯಾರ್ಥಿಗಳು ಸಲ್ಲಿಸಲಾಗಿದ್ದಂತಹ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಕೊರೊನಾದಿಂದ ಸಿಇಟಿ ಪರೀಕ್ಷೆ ತಪ್ಪಿಸಿಕೊಂಡಿದ್ದಂತಹ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯುವುದಕ್ಕೆ ಒಪ್ಪಿಗೆ ನೀಡಿದೆ.
ಅಕ್ಟೋಬರ್ 16ರಂದು ಫಲಿತಾಂಶ ಪ್ರಕಟಿಸುವಂತೆ ಸೂಚನೆ

ಅಕ್ಟೋಬರ್ 14ರಂದು ನೀಟ್ ಪರೀಕ್ಷೆ ನಡೆಸಿ, ಅಕ್ಟೋಬರ್ 16ರಂದು ಫಲಿತಾಂಶ ಕೂಡ ಪ್ರಕಟಿಸುವಂತೆ ಸೂಚಿಸಿದೆ. ಸೆಪ್ಟೆಂಬರ್ 13ರಂದು ದೇಶಾದ್ಯಂತ 3,843 ಕೇಂದ್ರಗಳಲ್ಲಿ 14 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: