ಕರ್ನಾಟಕದೇಶಪ್ರಮುಖ ಸುದ್ದಿ

ಕಾವೇರಿ ನೀರು ಹಂಚಿಕೆ ವಿವಾದ: ಕೇಂದ್ರದ ಸಂಧಾನ ಸಭೆ ವಿಫಲ

ನವದೆಹಲಿ: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‍ ಸೂಚನೆಯಂತೆ ಕೇಂದ್ರದ ನೇತೃತ್ವದಲ್ಲಿ ತಮಿಳುನಾಡು ಮತ್ತು ಕರ್ನಾಟಕದೊಂದಿಗೆ ಸಭೆ ನಡೆಸಿದ್ದು, ಕೋರ್ಟ್‍ನಿಂದ ಹೊರಗಡೆ ಸಂಧಾನ ಪ್ರಯತ್ನ ನಡೆದಿದೆ ಎಂದು ಸಚಿವೆ ಉಮಾಭಾರತಿ ತಿಳಿಸಿದ್ದಾರೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೀರಿನ ವಿಚಾರದಲ್ಲಿ ರಾಜಕೀಯ ಬೇಡ. ಶಾಂತಿಯುತವಾಗಿ ಸಮಸ್ಯೆ ಬಗೆಹರಿಸೋಣ. ಯಾವುದೇ ರಾಜ್ಯದಲ್ಲಿ ಅಹಿತಕರ ಘಟನೆ ನಡೆದಲ್ಲಿ ನಾನು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದ್ದಾರೆ.

ರಾಜ್ಯಗಳಲ್ಲಿನ ನೀರಿನ ಮಟ್ಟವನ್ನು ತಿಳಿಯಲು ತಜ್ಞರ ತಂಡ ಕಳುಹಿಸುವಂತೆ ಸಭೆಯಲ್ಲಿ ಕರ್ನಾಟಕ ಕೋರಿತ್ತು. ಆದರೆ, ತಮಿಳುನಾಡು ಈ ಪ್ರಸ್ತಾಪವನ್ನು ತಳ್ಳಿಹಾಕಿದೆ. ಇಂದಿನ ಸಭೆಯ ವರದಿಯನ್ನು ಸುರ್ಪೀಂ ಕೋರ್ಟ್‍ಗೆ ಸಲ್ಲಿಸಲಾಗುವುದು. ಸುಪ್ರೀಂ ಕೋರ್ಟ್‍ ತೀರ್ಪಿಗಾಗಿ ಕಾಯೋಣ ಎಂದು ಉಮಾಭಾರತಿ ತಿಳಿಸಿದ್ದಾರೆ.

ಸಿದ್ದರಾಮಯ್ಯ ಸುದ್ದಿಗೋಷ್ಠಿ: ದೆಹಲಿಯ ಶ್ರಮಶಕ್ತಿ ಭವನದಲ್ಲಿ ನಡೆದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ನಾಲ್ಕು ಜಲಾಶಯಗಳಲ್ಲಿ 27.6 ಟಿಎಂಸಿಯಷ್ಟೇ ನೀರಿರುವುದಾಗಿ ತಿಳಿಸಿದ್ದೇನೆ. ಈ ನೀರು ಕುಡಿಯಲಷ್ಟೇ ಉಪಯೋಗಿಸಲಾಗುವುದು. ತಮಿಳುನಾಡಿನ ಜನರಿಗೆ ಕುಡಿಯುವ ನೀರಿನ ಕೊರತೆಯಿಲ್ಲ. ಸಾಂಬಾ ಬೆಳೆಗೂ ಸಾಕಾಗುವಷ್ಟು ನೀರು ಮೆಟ್ಟೂರು ಡ್ಯಾಂನಲ್ಲಿದೆ. ರಾಜ್ಯಗಳ ಜಲಾಶಯ ಪರಿಶೀಲಿಸಲು ತಜ್ಞರ ತಂಡ ಕಳುಹಿಸುವಂತೆ ಕೋರಿದ್ದೆವು. ಆದರೆ, ತಮಿಳುನಾಡು ಇದನ್ನು ತಿರಸ್ಕರಿಸಿದೆ ಎಂದು ತಿಳಿಸಿದರು.

Leave a Reply

comments

Related Articles

error: