ಕ್ರೀಡೆಮೈಸೂರು

ರಾಜ್ಯ ಮಟ್ಟದ ತೋಳ್ಕುಸ್ತಿ ಚಾಂಪಿಯನ್‍ ಶಿಪ್‍ನಲ್ಲಿ ಎನ್.ಆರ್.ಸಮೂಹ ಉದ್ಯೋಗಿಗೆ ಚಿನ್ನದ ಪದಕ

ಸೈಕಲ್ ಪ್ಯೂರ್ ಅಗರ್‍ಬತ್ತೀಸ್‍ಗಳ ತಯಾರಕರಾದ ಎನ್‍ಆರ್ ಸಮೂಹದ ಉದ್ಯೋಗಿ ಶಿರೀನ್ ರೆಜಿನಾಲ್ಡ್   ಹರಿಹರದಲ್ಲಿ ನಡೆದ ಐದನೇ ರಾಜ್ಯಮಟ್ಟದ ತೋಳ್ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಶಿರೀನ್ ಮಾತನಾಡಿ ನನ್ನ ಭಾವೋತ್ಕಟತೆಯ ಆಟವನ್ನು ನನ್ನ ವೃತ್ತಿಯೊಂದಿಗೆ ಮುಂದುವರಿಸಲು ಸಾಧ್ಯವಾಗಿರುವುದಕ್ಕೆ ನಾನು ಹರ್ಷಗೊಂಡಿದ್ದೇನೆ. ಈ ಸಾಧನೆಗೈಯುವಲ್ಲಿ ನನ್ನನ್ನು ಬೆಂಬಲಿಸಿದ ಎನ್‍ಆರ್ ಕುಟುಂಬಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದಿದ್ದಾರೆ.

ಆರ್ಮ್ ರೆಸ್ಲಿಂಗ್ ಚಾಂಪಿಯನ್‍ಷಿಪ್‍ಅನ್ನು ಹೊಸ ದಿಲ್ಲಿಯ ಭಾರತೀಯ ಆರ್ಮ್ ರೆಸ್ಲಿಂಗ್ ಅಸೋಸಿಯೇಷನ್ ಮಾನ್ಯತೆ ಪಡೆದಿರುವ ಕರ್ನಾಟಕ ಆರ್ಮ್ ರೆಸ್ಲಿಂಗ್ ಅಸೋಸಿಯೇಷನ್ ಮತ್ತು ದಾವಣಗೆರೆ ಆರ್ಮ್ ರೆಸ್ಲಿಂಗ್ ಅಸೋಸಿಯೇಷನ್ ಜಂಟಿಯಾಗಿ ಆಯೋಜಿಸಿದ್ದವು. ಈ ಸ್ಪರ್ಧೆಯಲ್ಲಿ ಕರ್ನಾಟಕದ ಎಲ್ಲೆಡೆಯ 120 ಸ್ಪರ್ಧಿಗಳು ಭಾಗವಹಿಸಿದ್ದರು. ಇವರ ಜೊತೆ ಶಿರೀನ್ 90-95 ಕೆಜಿ ತೂಕದ ವಿಭಾಗದಲ್ಲಿ  ಭಾಗವಹಿಸಿ ಚಿನ್ನದ ಪದಕ ಪಡೆದರು.

ಸೈಕಲ್ ಪ್ಯೂರ್ ಅಗರ್‍ಬತ್ತೀಸ್‍ನ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ ಮಾತನಾಡಿ, ನಮ್ಮ ಉದ್ಯೋಗಿಗಳ ಸಾಧನೆಗಳ ಬಗ್ಗೆ ನಮಗೆ ಯಾವಾಗಲೂ ಹೆಮ್ಮೆಯಿದೆ ಎಂದರಲ್ಲದೇ  ಶಿರೀನ್‍ಗೆ ಅವರ ಸಾಧನೆಗೆ ಅಭಿನಂದಿಸಿದರು. (ಎಸ್-ಎಚ್)

Leave a Reply

comments

Related Articles

error: