
ಮೈಸೂರು
ಅರಮನೆ ಆವರಣದಲ್ಲಿ ಕುದುರೆಗಳಿಗೂ ನಡೆದ ತಾಲೀಮು
ಮೈಸೂರು,ಅ.13:- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ನಾಲ್ಕೇ ದಿನಗಳು ಬಾಕಿ ಇದ್ದು, ಈ ನಡುವೆ ಅರಮನೆ ಆವರಣದಲ್ಲಿ ದಸರಾ ಆನೆಗಳಿಗೆ ತಾಲೀಮು ಜೋರಾಗಿದೆ. ಈ ಮಧ್ಯೆ ಇಂದಿನಿಂದ ಅಶ್ವಾರೋಹಿದಳಕ್ಕೂ ತಾಲೀಮು ನಡೆಸಲಾಗುತ್ತಿದೆ.
ಈ ಬಾರಿ ದಸರಾ ಜಂಬೂ ಸವಾರಿ ಅರಮನೆ ಆವರಣಕ್ಕೆ ಸೀಮಿತವಾಗಿದ್ದು, ಹೀಗಾಗಿ ದಸರಾ ಗಜಪಡೆಗಳಿಗೆ ಭಾರ ಹೊರುವ ತಾಲೀಮು ನಡೆಸಲಾಗುತ್ತಿದೆ. ಆನೆಗಳ ಜೊತೆ ಹೊಂದಿಕೊಳ್ಳುವ ಸಲುವಾಗಿ ಇಂದಿನಿಂದ ಅಶ್ವಾರೋಹಿ ದಳಕ್ಕೂ ತಾಲೀಮು ನಡೆಸಲಾಗುತ್ತಿದೆ. ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಆನೆಗಳು ವಿಚಲಿತವಾಗದಂತೆ ಕುದುರೆಗಳು ಹಿಂದಿನಿಂದ ಹೆಜ್ಜೆ ಹಾಕಲಿದ್ದು, ಮೆರವಣಿಗೆಯಲ್ಲಿ ಅಶ್ವಾರೋಹಿದಳ ಪ್ರಮುಖ ಆಕರ್ಷಣೆಯಾಗಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ವೈದ್ಯಾಧಿಕಾರಿ ಡಾ ನಾಗರಾಜ್ ಸಮ್ಮುಖದಲ್ಲಿ ಕೆ ಎಸ್ ಆರ್ ಪಿ ಮೌಂಟೆಡ್ ಪೊಲೀಸರ ಕುದುರೆಗಳಿಗೆ ತಾಲೀಮು ನಡೆಸಲಾಯಿತು. ಕ್ಯಾಪ್ಟನ್ ಅಭಿಮನ್ಯು ಟೀಂ, ಕುದುರೆಗಳ ಜೊತೆ ನಿರರ್ಗಳವಾಗಿ ಹೆಜ್ಜೆ ಹಾಕಿವೆ. (ಕೆ.ಎಸ್,ಎಸ್.ಎಚ್)