ಮೈಸೂರು

ಕಾಡಿನಿಂದ ತಪ್ಪಿಸಿಕೊಂಡ ಮರಿಯಾನೆಗೆ ಆಶ್ರಯ

ಕಾಡಿನಿಂದ ತಪ್ಪಿಸಿಕೊಂಡ ಆನೆ ಮರಿಯೊಂದಕ್ಕೆ ಹುಣಸೂರು ತಾಲೂಕಿನ ಆನೆ ಶಿಬಿರದಲ್ಲಿ ಆಶ್ರಯ ನೀಡಲಾಗಿದೆ. ಹುಣಸೂರು ತಾಲ್ಲೂಕಿನ ಮತ್ತಿಗೋಡು ಅರಣ್ಯ ಪ್ರದೇಶದ ಕಂಠಾಪುರ ಆನೆ ಶಿಬಿರದಲ್ಲಿ  ಮರಿಯಾನೆಯೊಂದಕ್ಕೆ  ಆಶ್ರಯ ನೀಡಲಾಗಿದೆ.
ಮರಿಯಾನೆಯನ್ನು ಹಸುವಿನ ಹಾಲು ನೀಡಿ ಆರೈಕೆ ಮಾಡಲಾಗುತ್ತಿದೆ. ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಮೇಟಿಕುಪ್ಪೆ ಅರಣ್ಯ ಪ್ರದೇಶದ ಬಳಿ ತಾಯಿಯಿಂದ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 10 ದಿನಗಳ ಹಿಂದೆ ತಪ್ಪಿಸಿಕೊಂಡು ಬಂದಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು  ಆನೆ ಮರಿಯ ರಕ್ಷಣೆಯನ್ನು ಮಾಡಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: