ಮೈಸೂರು

ಹಿಂಬಡ್ತಿ ಆದೇಶವನ್ನು ಜಾರಿಗೊಳಿಸದಂತೆ ಒತ್ತಾಯಿಸಿ ಪ್ರತಿಭಟನೆ

ರಾಜ್ಯ ಸರ್ಕಾರ ಹಿಂಬಡ್ತಿ ಆದೇಶವನ್ನು ಜಾರಿಗೊಳಿಸಬಾರದೆಂದು ಒತ್ತಾಯಿಸಿ ಬಡ್ತಿ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಮೈಸೂರಿನ ಪುರಭವನದ ಎದುರು ಪ್ರತಿಭಟನೆ ನಡೆಯಿತು.

ಪುರಭವನದ ಅಂಬೇಡ್ಕರ್ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಸುಪ್ರೀಕೋರ್ಟ್ ಫೆ.9ಕ್ಕೆ ನೀಡಿದ ತೀರ್ಪಿನಿಂದ ನಾಡಿನ ದಲಿತ ಜನಾಂಗ ಆತಂಕ್ಕೊಳಗಾಗಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಡ್ತಿ ಪಡೆದು ಹತ್ತು ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಎಸ್.ಸಿ/ಎಸ್.ಟಿ ಅಧಿಕಾರಿಗಳು ಮತ್ತು ನೌಕರರು ಸುಪ್ರೀಂಕೋರ್ಟ್ ನ ಆಘಾತಕಾರಿ ತೀರ್ಪಿನಿಂದ ಹಿಂಬಡ್ತಿ ಪಡೆಯುವ ಭಯದಲ್ಲಿದ್ದಾರೆ. ಸರ್ಕಾರ ದಲಿತರ ಪರವಾಗಿ ಸರಿಯಾದ ಪುರಾವೆಗಳನ್ನು ಒದಗಿಸಿ ಸಮರ್ಥವಾಗಿ ವಾದ ಮಾಡದೇ ಕಾಟಾಚಾರಕ್ಕೆ ವಾದ ಮಂಡಿಸಿರುವುದರಿಂದ ಆತಂಕವುಂಟಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಇದಕ್ಕೆ ನೇರ ಹೊಣೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಅಧ್ಯಕ್ಷ ಎಂ.ವೆಂಕಟಸ್ವಾಮಿ, ರಾಜ್ಯಾಧ್ಯಕ್ಷ ಆಂಜನಪ್ಪ,  ರಾಜ್ಯ ಮುಖಂಡ ತಿಮ್ಮಯ್ಯ, ಸಂಚಾಲಕರಾದ ಲಯನ್ ಮಂಜುನಾಥ, ವೀರಭದ್ರಯ್ಯ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: