ಪ್ರಮುಖ ಸುದ್ದಿಮೈಸೂರು

ಮುಖ್ಯಮಂತ್ರಿಗಳ ದುರಹಂಕಾರದಿಂದ ಉಪಚುನಾವಣೆ ನಡೆಯುತ್ತಿದೆ : ಮುಖ್ಯಮಂತ್ರಿಗಳ ವಿರುದ್ಧ ವಿ.ಶ್ರೀನಿವಾಸ್ ಪ್ರಸಾದ್ ವಾಕ್ ಪ್ರಹಾರ

ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ ಅಧಿಕಾರಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಬೇಡಿಕೆಯನ್ನು ಇಟ್ಟಿಲ್ಲ ಎಂದು ತನ್ನ 43 ವರ್ಷದ ರಾಜಕೀಯ ಜೀವನದ ಹಳೆಯ ದಿನಗಳನ್ನು ನೆನಪಿಸಿಕೊಂಡ  ನಂಜನಗೂಡು ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಕ್ ಪ್ರಹಾರ ನಡೆಸಿದರು.

ಮೈಸೂರಿನಲ್ಲಿ  ನಡೆದ ಸುದ್ದಿಗೋಷ್ಠಿ ಮಾತನಾಡಿದ ಅವರು ಸಂಪುಟದಿಂದ ತೆಗೆದು ಹಾಕಿದಕ್ಕೆ  ಮುಖ್ಯಮಂತ್ರಿಗಳು ಕಾರಣ ನೀಡಿಲ್ಲ.ನನ್ನ ಆಡಳಿತ ಅವಧಿಯಲ್ಲಿ ಉತ್ತಮವಾದ ಕೆಲಸ ಮಾಡಿದ್ದೇನೆ. ಆ ಬಗ್ಗೆ ಚರ್ಚೆಗೆ ಸಿದ್ದನಿದ್ದೇನೆ.ಮನಸ್ವಿನಿ ಯೋಜನೆ ನನ್ನದೇ ಎಂದರು.
ಸಿದ್ದರಾಮಯ್ಯನವರಿಗೆ ಯಾಕೆ  ನನ್ನ ಮೇಲೆ ದ್ವೇಷ. ಯಾಕೆ ನನ್ನ ಮೇಲೆ ಕೀಳಿರಿಮೆ ಎಂದು ಪ್ರಶ್ನಿಸಿದರಲ್ಲದೇ ಯಾರ್ರಿ ನೀವು ಪರಮೇಶ್ವರ್ 1989 ರಲ್ಲಿ  ನೇವು ಹೇಗೆ ಟಿಕೇಟ್ ಪಡೆದಿರಿ. ನಿಮ್ಮಪ್ಪ ತುಂಬಾ ಒಳ್ಳೆಯವರು.ನಿಮ್ಮ ಮುಖವನ್ನೇ ನಾನೂ ನೋಡಿಲ್ಲ. ಪಕ್ಷದಲ್ಲಿ ನೀವು ಕಾಣಲೇ ಇಲ್ಲ. ಅಂದು ದುಡ್ಡು ಕೊಟ್ಟು ಮಂತ್ರಿ ಗಾದಿಗೇರಿದ್ದೀರಿ.ನಾನೇ ಅದಕ್ಕೆ ಸಾಕ್ಷಿ.  ನನ್ನ ಸೋಲಿಗೆ  ಸಿದ್ದರಾಮಯ್ಯ ಅವರೇ ಕಾರಣ ಅಂತ ನನ್ನ ಬಳಿ ಹೇಳಿಕೊಂಡಿದ್ದು ಮರೆತು ಹೋಯಿತಾ?  ಇದೀಗ ಮಲ್ಲಿಕಾರ್ಜುನ ಖರ್ಗೆ ವಿಲ ವಿಲ ಅಂತ ಓದಾಡ್ಡುತ್ತಿದ್ದಾರೆ. ಅವರು  ತಂಜಾವೂರು ಬೊಂಬೆ ರೀತಿ. ದೇವರಾಜು ಅರಸು ಜೊತೆಯಲ್ಲಿದ್ದು ಅವರ  ಬೆನ್ನಿಗೇ ಚೂರಿ ಹಾಕಿದವರು.ಅವರ ಜೊತೆಯಲ್ಲಿ ಇದ್ದು 9 ಬಾರಿ ಆಯ್ಕೆ ಆಗಿದ್ದೀರಿ. ಎಷ್ಟು ಅಧಿಕಾರ ಅನುಭವಿಸಿದರೂ ಇನ್ನೂ ಅಧಿಕಾರದ ದಾಹ ನೀಗಿಲ್ಲ.ನಾಚಿಕೆ ಆಗಬೇಕು ನಿಮಗೆ. ನಿಮ್ಮ ಮಗನಿಗೆ ನಿಮ್ಮ ಕ್ಷೇತ್ರದ ಸ್ಥಾನ ಕೊಡಿಸಿದ್ದೀರಿ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಹರಿಹಾಯ್ದರು.ನನ್ನ ಸ್ವಾಭಿಮಾನದಿಂದಾಗಿಯೇ ರಾಜೀನಾಮೆ ಕೊಟ್ಟಿದ್ದೇನೆ, ಇದೀಗ ಪ್ರತಿಷ್ಠೆಯ  ಚುನಾವಣೆ. ಮುಖ್ಯಮಂತ್ರಿಗಳಿಗೆ ದುರಹಂಕಾರ ಎಂದು ಯಾರನ್ನು ಕೇಳಿದರೂ ಹೇಳುತ್ತಾರೆ. ನಂಜನಗೂಡಿನಲ್ಲಿ ಬಿಜೆಪಿಯ ಭೂಕಂಪನ ಆಗಿದೆ. ಅದರಿಂದ  ಕಾಂಗ್ರೆಸ್ ನ ಹಾವು ಚೇಳುಗಳು ಹೊರಗೆ ಬಂದಿದೆ ಎಂದು ವ್ಯಂಗ್ಯವಾಡಿದರು. ಮುಖ್ಯಮಂತ್ರಿ  ಪಿತೂರಿ ಮಾಡಿದ್ದರಿಂದಲೇ ಚುನಾವಣೆ ಬಂದಿದೆ. 80 ಲಕ್ಷದ ಡೈಮಂಡ್ ವಾಚ್ ಕಟ್ಟೋ ನೀವು ಜನರ ಬಳಿ ಹೋಗಿ ಮತದಾನದ ಕೂಲಿ ಕೇಳ್ತಿರಾ, ಮಾನಸಿಕವಾಗಿ ನಿಮಗಿಂತ ನೂರರಷ್ಟು ಶಕ್ತಿಯುತವಾಗಿದ್ದೇನೆ.ನಿಮ್ಮದು ಪರಿಣಾಮಕಾರಿ ಮಂತ್ರಿ ಮಂಡಲವೇ ಎಂದು ಪ್ರಶ್ನಿಸಿದರು.

ನಾನು ಎಡಪಂಥೀಯನಲ್ಲ. ಬಲಪಂಥೀಯನೂ ಅಲ್ಲ. ನಾನೂ ಮಾನವತಾವಾದಿ. ನಾನೂ ತತ್ವ ಸಿದ್ದಾಂತಗಳ ಮೇಲೆ ಕೆಲಸ ಮಾಡುವವನು. ನನಗೆ ನನ್ನದೇ ಆದ ತತ್ವ ಸಿದ್ದಾಂತವಿದೆ. ನಾನೂ ಅದಕ್ಕೆ ಎಂದಿಗೂ ಒಪ್ಪಂದ ಮಾಡಿಕೊಳ್ಳಲಾರೆ ಎಂದರು. .1980 ರಲ್ಲಿ ಪಕ್ಷೇತರನಾಗಿ 8ಸಾವಿರ ಮತ ಪಡೆದಿದ್ದೀರಿ. ನಾನು ಪಕ್ಷೇತರನಾಗಿ ನಿಂತು ಒಂದೂವರೆ ಲಕ್ಷ ಪಡೆದಿದ್ದೆ. ಈಗ  ಬಿಜೆಪಿ ಸೇರಿದ್ದೇನೆ.13ಕ್ಕೆ ನೋಡಿಕೊಳ್ಳಿ ಎಷ್ಟು ಮತ ಪಡೆಯುತ್ತೇನೆ ಎಂದು. ಕಾಂಗ್ರೆಸ್ ಮುಳುಗುತ್ತಿರುವ ದೋಣಿ. ಜನ ಮತ ಕೊಡ್ತಾರಾ ನೀವೇ ನೋಡಿ. 13ಕ್ಕೆ ಮುಖ್ಯಮಂತ್ರಿಗಳ ದುರಂಹಕಾರದ ಗರ್ವಭಂಗವಾಗಲಿದೆ. ನಾಲ್ಕು ವರ್ಷದಿಂದ  ನಿದ್ದೆ ಮಾಡುತ್ತಾ  ಇದ್ದೀರಿ. ಎಲ್ಲಿ ಹೋಗಿ ಮಲಗಿದ್ದು, ಆ ವೇಳೆ ಮಾಡದ ಕೆಲಸ ಇವಾಗ ಮಾಡುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿದರು. ಗೃಹಮಂತ್ರಿಗಳು ಯಾರು ಎಂಬುದೇ ತಿಳಿಯುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಅಥವಾ ಕೆಂಪಯ್ಯನ ಎಂಬುದೇ ತಿಳಿಯುತ್ತಿಲ್ಲ. ಗೃಹ ಖಾತೆ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.13ರ ನಂತರ ಮುಖ್ಯಮಂತ್ರಿಗಳ  ಹಿಂದೆ ಇರುವವರು ಇರುವುದಿಲ್ಲ. ಎಲ್ಲರೂ ಕಾಣದಂತೆ ನಿಮಗೆ ಕೈಕೊಟ್ಟು ಹೋಗುತ್ತಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಅಶೋಕ್, ಮುಡಾ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಶಿವಣ್ಣ, ನಾಗೇಂದ್ರ , ಹೇಮಂತ್ ಕುಮಾರ್ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: