ಮೈಸೂರು

ಜಂಬೂ ಸವಾರಿ ದಿನ ಸಾರೋಟಿನಲ್ಲಿ ತಾಯಿ ಚಾಮುಂಡೇಶ್ವರಿ ಪ್ರತಿಮೆಯಿಟ್ಟು ಮೆರವಣಿಗೆ :

ಮೈಸೂರು,ಅ.14:- ಮೈಸೂರು ದಸರಾ ಉತ್ಸವ ನಡೆಯಲೇಬೇಕು ಎಂದು ಆಗ್ರಹಿಸಿ ನಗರದ ಆರ್ಗೇಟ್ ವೃತ್ತದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ಮೈಸೂರು ದಸರಾ ಹೋಗಿ ಯಡಿಯೂರಪ್ಪ ದಸರಾ ಆಗಿದೆ .ಯಡಿಯೂರಪ್ಪ ಗೆ ನಮ್ಮ ಸಾಂಸ್ಕೃತಿಕ ದಸರಾ ಬೇಕಾಗಿಲ್ಲ. ಅವರಿಗೆ ನಗುವುದೇ ಗೊತ್ತಿಲ್ಲ , ಒಂದು ವರ್ಷಕ್ಕೊಮ್ಮೆ ನಗುತ್ತಾರೆ .ಪಕ್ಷಾಂತರ ಪಿತಾಮಹ ಯಡಿಯೂರಪ್ಪ ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ದಸರಾಗೆ ಲೈಟ್ ಬೇಕು ಆದರೆ ಜಂಬೂ ಸವಾರಿ ಬೇಡ. ಇದು ಹುಚ್ಚರ ಸರ್ಕಾರ , ದಿನಕೊಬ್ಬ ಮಂತ್ರಿ ಮೈಸೂರಿಗೆ ಬರ್ತಾರೆ .ಇವರೆಲ್ಲರೂ ದಸರಾ ಉತ್ಸವಕ್ಕೆ ಮಂಕು ಬಡಿಸಿದ್ದಾರೆ .ದಸರಾ ನಡೆಸಲು ಆಗದಿದ್ದರೆ ರಾಜೀನಾಮೆ ಕೊಡಿ .ಕೊರೋನಾ ಇದೆ ನಿಜ, ಆದರೆ ದಸರಾವನ್ನು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಮಾಡಬಹುದಾಗಿತ್ತು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಯಡಿಯೂರಪ್ಪ ಗೆ ಕೇವಲ ಸರ್ಕಾರ ಉಳಿಸಿಕೊಳ್ಳುವುದು ,ಮಂತ್ರಿಗಿರಿ ಹಂಚುವುದು ಇದಿಷ್ಟೇ ಗೊತ್ತಿರೋದು. ವಿದ್ಯಾಗಮವನ್ನು ಶಾಶ್ವತವಾಗಿ ಬಂದ್ ಮಾಡಬೇಕು. ಇಲ್ಲದಿದ್ದರೆ ಕರ್ನಾಟಕ ಬಂದ್ ಮಾಡಲಾಗುವುದು ಕೊರೋನಾದಿಂದ ಶಿಕ್ಷಕರು ಸತ್ತರೆ ಒಂದು ಕೋಟಿ ಪರಿಹಾರ ಕೊಡಬೇಕು. ವಿದ್ಯಾರ್ಥಿಗಳು ಸತ್ತರೆ ಒಂದು ಕೋಟಿ ಪರಿಹಾರ ಕೊಡಬೇಕು .ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ .ಜಂಬೂ ಸವಾರಿ ದಿನ ನಾವು ಸಾರೋಟಿನಲ್ಲಿ ತಾಯಿ ಚಾಮುಂಡೇಶ್ವರಿ ಪ್ರತಿಮೆಯಿಟ್ಟು ಮೆರವಣಿಗೆ ಮಾಡುತ್ತೇವೆ ಎಂದರು.
ನೀರಿನ ವಿಚಾರಕ್ಕೆ ಗೋವಾ ತಂಟೆ ಹಿನ್ನಲೆ ಪ್ರತಿಕ್ರಿಯಿಸಿ ಗೋವಾ ತಂಟೆ ತೆಗೆಯಲು ಸಾಧ್ಯವಿಲ್ಲ.ಅದು ನ್ಯಾಯಾಲಯದ ತೀರ್ಮಾನ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: