ಮೈಸೂರು

ಗುಂಡ್ಲುಪೇಟೆಯಲ್ಲಿ ಲಕ್ಷಾಂತರ ರೂ. ನಗದು ಪತ್ತೆ

ಗುಂಡ್ಲುಪೇಟೆ ಖಾಸಗಿ ಹೋಟೆಲ್ ಬಳಿಯಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ದೇಶಕರ ಕಾರಿನಲ್ಲಿ ಲಕ್ಷಾಂತರ ರೂ. ನಗದು ಪತ್ತೆಯಾಗಿದೆ.

ಗುಂಡ್ಲುಪೇಟೆಯ ಖಾಸಗಿ ಹೋಟೆಲ್ ಮುಂದೆ ಇದ್ದ ಕಾರಿನಲ್ಲಿ 2 ಸಾವಿರ ನೋಟುಗಳ ಹತ್ತು ಕಂತೆ ಪತ್ತೆಯಾಗಿದೆ.
ಸುಮಾರು 20 ಲಕ್ಷರೂ ಹಣ ಇರುವ ಶಂಕೆವ್ಯಕ್ತವಾಗಿದೆ. ಇದು ಕಾಂಗ್ರೆಸ್ ಪಕ್ಷದ ಹಣವಿರಬಹುದೆನ್ನುವ ಅನುಮಾನ ಶುರುವಾಗಿದೆ. ಬಿಜೆಪಿ ಕಾರ್ಯಕರ್ತರು ಕಾರ್ಯಚಾರಣೆ ನಡೆಸಿ ಹಣ ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.
ಗುಂಡ್ಲುಪೇಟೆ ಪಟ್ಟಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: