ಮೈಸೂರು

ಕೋಟಿ ವೃಕ್ಷದಿಂದ ಬೀಜ ನೆಡುವ ಹಬ್ಬ : ಏ.9ರಂದು

ಕೋಟಿ ವೃಕ್ಷ ಪ್ರತಿಷ್ಠಾನದಿಂದ ಒಂದು ಲಕ್ಷ ಗಿಡ ನೆಡುವ ಉದ್ದೇಶದಿಂದ ಬೀಜ ನೆಡುವ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಶ್ರೀಕಾಂತ್ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಏಪ್ರಿಲ್ 9 ರಂದು ಶ್ರೀರಾಂಪುರದ ಮೂಡಾ ಪಾರ್ಕ್ ನಲ್ಲಿ ಸಂಜೆ ಪರಿಸರ ಪ್ರೇಮಿಗಳು  ಇಟ್ಟುಗೂಡಿ ಚೀಲಗಳಿಗೆ ಮಣ್ಣು ತುಂಬಿಸಿ, ನೀರು ಹಾಕಿ, ಬೀಜ ನೆಡುವ ಸಂಭ್ರಮದ ಕಾರ್ಯಕ್ರಮವಿದಾಗಿದೆ ಎಂದು ತಿಳಿಸಿದರು. ನಮ್ಮ ಪ್ರತಿಷ್ಠಾನ 1 ಲಕ್ಷ ಸಸಿ ನೆಡುವ ಉದ್ದೇಶವನ್ನು ಹೊಂದಿದೆ. ಮಾರ್ಚ್ ಏಪ್ರಿಲ್‍ನಲ್ಲಿ ಬೀಜ ಬಿತ್ತಲು ಯೋಗ್ಯವಾಗಿದ್ದು ಮಳೆಗಾಲಕ್ಕೆ ಯೋಗ್ಯವಾದ ಸಸಿ ಬೆಳೆಯಲಿದೆ. ಜೂನ್ ಒಳಗೆ ಒಂದು ಲಕ್ಷ ಸಸಿಗಳನ್ನು ತಯಾರು ಮಾಡಿ ಉಚಿತವಾಗಿ ಹಂಚುವುದು ಕೋಟಿ ವೃಕ್ಷ ಪ್ರತಿಷ್ಠಾನದ ಗುರಿಯಾಗಿದೆ. ಈಗಾಗಲೇ ಅನೇಕ ಸಂಘ ಸಂಸ್ಥೆಗಳು ನಮ್ಮ ಜೊತೆ ಕೈ ಜೋಡಿಸಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ವಿನಾಯಕ್ ,ಭಾಸ್ಕರ್, ಸಾಹುಕಾರ್,  ರಾಮಚಂದ್ರಭಟ್ ಹಾಜರಿದ್ದರು.  (ಕೆ.ಎಂ.ಆರ್)

Leave a Reply

comments

Related Articles

error: