ಮೈಸೂರು

ಸ್ವಾರ್ಥಕ್ಕಾಗಿ ಮಡಿವಾಳ ಜನಾಂಗ ಬಳಕೆ : ಪ್ರಶಾಂತ್ ಆರೋಪ

ಮೈಸೂರು ಪ್ರಾಂತ್ಯದ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಪ್ರಚಾರದಲ್ಲಿ ಪ್ರಮುಖ ರಾಜಕೀಯ ಪಕ್ಷವೊಂದರ ಮುಖಂಡ ಎನಿಸಿಕೊಂಡಿರುವ ರಘು ಕೌಟಿಲ್ಯ ತಮ್ಮ ಸ್ವಾರ್ಥಕ್ಕಾಗಿ ಮಡಿವಾಳ ಜನಾಂಗದವರನ್ನು ಬಳಸಿಕೊಂಡು ಜನಾಂಗದವರ ಮಧ್ಯೆ ಒಡಕು ಉಂಟು ಮಾಡುತ್ತಿದ್ದಾರೆ ಎಂದು ಮೈಸೂರು ಜಿಲ್ಲಾ ವೀರ ಮಡಿವಾಳರ ಸಂಘ  ಕಾರ್ಯಾಧ್ಯಕ್ಷ ಪ್ರಶಾಂತ್ ಅರೋಪಿಸಿದ್ದಾರೆ.

ಮೈಸೂರು  ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಜನಾಂಗಕ್ಕಾಗಿ ಮೈಸೂರು ಪ್ರಾಂತ್ಯದಲ್ಲಿ ಸಂಘಟನೆಗಳಲ್ಲಿ ಭಾಗಿಯಾಗಿರುವುದಿಲ್ಲ. ಚುನಾವಣೆಗಳು ಬಂದಾಗ ಮಾತ್ರ ಮಡಿವಾಳ ಜನಾಂಗದವರ ಮೇಲೆ ಅಪಾರವಾದ ಪ್ರೀತಿ ತೋರಿಸಿ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇವರು ರಾಜಕೀಯ ಪಕ್ಷದಲ್ಲಿ ಹಲವು ವರ್ಷಗಳ ಕಾಲ ಇದ್ದು, ಅಧಿಕಾರವನ್ನು ಅನುಭವಿಸಿ ಈಗ ಅದೇ ಪಕ್ಷವನ್ನು ಟೀಕಿಸುತ್ತಿರುವ ಇವರು ಆ ಪಕ್ಷದಿಂದ ಮಡಿವಾಳರಿಗೆ  ಯಾವುದೇ ಅಧಿಕಾರ ನೀಡಿಲ್ಲ.  ತಮ್ಮ ಅವರು ರಾಜಕೀಯಕ್ಕಾಗಿ ಜನಾಂಗದವರನ್ನು ಬಲಿಪಶು ಮಾಡುವುದು ಬೇಡ ಹಾಗೂ ಜನಾಂಗದವರನ್ನು ಬಿ.ಜೆ.ಪಿ ಪಕ್ಷಕ್ಕೆ ಒತ್ತೆ ಇಡುವುದು ಬೇಡ. ಇಂತಹ ಅವಕಾಶವಾದಿತನದ ರಾಜಕೀಯ ಹಾಗೂ ಮಡಿವಾಳ ಜನಾಂಗದವರ ದುರುಪಯೋಗವನ್ನು ನಮ್ಮ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು. ಮಡಿವಾಳ ಬಂಧುಗಳು ಇವರ ಸ್ವಾರ್ಥ ಹಾಗೂ ಮೋಡಿ ಮಾತಿಗೆ ಮರುಳಾಗದೇ ಸೂಕ್ತವಾದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷೆ ವಸಂತಕುಮಾರಿ, ಪ್ರಧಾನ ಕಾರ್ಯದರ್ಶಿ ಚನ್ನಕೇಶವ, ಸಿದ್ದಪ್ಪಾಜಿ, ಧರ್ಮರಾಜ್, ಜಯರಾಮು ಹಾಜರಿದ್ದರು. (ಕೆ.ಎಂ.ಆರ್ -ಎಸ್.ಎಚ್)

Leave a Reply

comments

Related Articles

error: