ಪ್ರಮುಖ ಸುದ್ದಿಮೈಸೂರು

ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ : ಮಾಜಿ ಸಂಸದ ಧೃವನಾರಾಯಣ್ ಕಿಡಿ

ಮೈಸೂರು,ಅ.15:- ಕೊರೋನಾ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರಳ ದಸರಾ ಮಾಡಬೇಕಿತ್ತು. ಆದರೆ, ಈ ಸರ್ಕಾರದವರು ತೋರಿಕೆ ದಸರಾ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ಆರ್.ಧೃವನಾರಾಯಣ್ ಕಿಡಿಕಾರಿದರು.
ಮೈಸೂರಿನಲ್ಲಿಂದು ಮಾತನಾಡಿದ ಮಾಜಿ ಸಂಸದ ಆರ್. ಧೃವನಾರಾಯಣ್, ಕೊರೋನಾ ಸಂದರ್ಭದಲ್ಲಿ ದಸರಾವನ್ನು ಮನೆ, ಮನೆಯಲ್ಲಿ ಮಾಡಬೇಕಿತ್ತು. ದಸರಾಗೆ ಖರ್ಚು ಮಾಡುತ್ತಿರುವ ಹಣವನ್ನು ಕೊರೋನಾ ನಿರ್ವಹಣೆಗೆ ಬಳಸಬಹುದಿತ್ತು. ಆದರೆ ಈ ಸರ್ಕಾರದವರು ಅದನ್ನು ಬಿಟ್ಟು ಬೇರೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಕೊರೋನಾ ನಿಲ್ಲುತ್ತಿಲ್ಲ. ಮೈಸೂರು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಕೊರೋನಾ ನಿಯಂತ್ರಣ ಮಾಡುವುದರಲ್ಲಿ ವಿಫಲರಾಗಿದ್ದಾರೆ. ಸರ್ಕಾರ ಮಾಡದ ಕೆಲಸವನ್ನು ಆರೋಗ್ಯ ಹಸ್ತದ ಮೂಲಕ ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: