ಕ್ರೀಡೆಪ್ರಮುಖ ಸುದ್ದಿ

ಹಿರಿಯ ಕ್ರೀಡಾ ಪತ್ರಕರ್ತ ಕಿಶೋರ್ ಭಿಮಾನಿ ನಿಧನ

ದೇಶ( ಕೋಲ್ಕತ್ತಾ)ಅ.16:- ಹಿರಿಯ ಕ್ರೀಡಾ ಪತ್ರಕರ್ತ ಮತ್ತು ಕ್ರಿಕೆಟ್ ಕಮೆಂಟೇಟರ್ ಕಿಶೋರ್ ಭೀಮಾನಿ ನಿಧನವಾಗಿದ್ದಾರೆ.
ಅವರಿಗೆ 74ವರ್ಷ ವಯಸ್ಸಾಗಿತ್ತು. ಅವರು ಕೆಲವು ದಿನಗಳ ಹಿಂದೆ ಸೆರೆಬ್ರಲ್ ಅಟ್ಯಾಕ್ ನಿಂದ ಬಳಲುತ್ತಿದ್ದರು ಮತ್ತು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರೆಂದು ಕುಟುಂಬದ ಮೂಲಗಳು ತಿಳಿಸಿವೆ.

1987 ರಲ್ಲಿ ಅಹಮದಾಬಾದ್‌ನಲ್ಲಿ ಪಾಕಿಸ್ತಾನ ವಿರುದ್ಧ ಡ್ರಾ ಪಂದ್ಯದ ವೇಳೆ ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದಾಗ ಭೀಮಾನಿ ಪಂದ್ಯದ ಕಮೆಂಟರಿ ಮಾಡಿದ್ದರು. 1980 ರ ದಶಕದಲ್ಲಿ ಬ್ರಿಟಿಷ್ ಪ್ರಕಟಣೆಗಳಿಂಡ ಆಕರ್ಷಿತರಾಗುವ ಭಾರತೀಯ ಕ್ರಿಕೆಟ್ ಬರಹಗಾರರಲ್ಲಿ ಒಬ್ಬರಾದ ಭೀಮಾನಿ 1986 ರ ಆಸ್ಟ್ರೇಲಿಯಾದ ವಿರುದ್ಧ ಚೆಪಾಕ್ ನಲ್ಲಿ ನಡೆದ ಪ್ರಸಿದ್ಧ ಟೆಸ್ಟ್ ಪಂದ್ಯದ ಅಂತಿಮ ಕ್ಷಣಗಳ ಸಾಕ್ಷಿಯಾಗಿದ್ದರು.ಅವರು 1978 ರಿಂದ 1980 ರವರೆಗೆ ಕಲ್ಕತ್ತಾ ಸ್ಪೋರ್ಟ್ಸ್ ಜರ್ನಲಿಸ್ಟ್ಸ್ ಕ್ಲಬ್‌ನ ಅಧ್ಯಕ್ಷರಾಗಿದ್ದರು.
ಅವರು ಪತ್ನಿ ರೀಟಾ ಮತ್ತು ಮಗ ಗೌತಮ್ ರನ್ನು ಅಗಲಿದ್ದಾರೆ.(ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: