ಪ್ರಮುಖ ಸುದ್ದಿಮನರಂಜನೆ

ಗುಟ್ಕಾ ಕಳ್ಳ ಸಾಗಣೆ ಪ್ರಕರಣ : ಖ್ಯಾತ ನಟ ಸಚಿನ್ ಜೋಷಿ ಬಂಧನ

ದೇಶ( ಮುಂಬೈ)ಅ.16:- ಹೈದರಾಬಾದ್ ಪೊಲೀಸರು ಬಾಲಿವುಡ್ ಹಾಗೂ ಟಾಲಿವುಡ್ ನ ಖ್ಯಾತ ನಟ ಸಚಿನ್ ಜೋಷಿ ಅವರನ್ನು ಮುಂಬೈನಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ನಟ ಸಚಿನ್ ಜೋಷಿ ಮತ್ತು ಅವರ ತಂದೆ ಜೆಎಂ ಜೋಷಿ ಅವರನ್ನು ಹೈದರಾಬಾದ್ ಪೊಲೀಸರು ಗುಟ್ಕಾ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಮಾದಕ ದ್ರವ್ಯ ಪ್ರಕರಣದ ಬೆನ್ನಲ್ಲೇ ಗುಟ್ಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್ ಜೋಷಿ ಬಂಧನ ವಿಚಾರ ಇದೀಗ ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿದೆ.
ಹೈದರಾಬಾದ್‌ನಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಇತ್ತೀಚೆಗೆ ಭಾರೀ ಗುಟ್ಕಾ ಕಳ್ಳಸಾಗಾಣಿಕೆದಾರನನ್ನು ಬಂಧಿಸಿದ್ದರು. ಸುಮಾರು 1.25 ಕೋಟಿ ಮೌಲ್ಯದ ಭಾರೀ ಪ್ರಮಾಣದ ಗುಟ್ಕಾ ಪೆಟ್ಟಿಗೆಗಳು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇರೆಗೆ ಆತನನ್ನು ವಶಕ್ಕೆ ಪಡೆದಿದ್ದರು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಚಿನ್ ಜೋಷಿಯನ್ನೂ ಕೂಡ ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸಚಿನ್ ಜೋಷಿ ವಿರುದ್ಧ ಐಪಿಸಿಯ ಸೆಕ್ಷನ್ 273, 420 ಮತ್ತು 336 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಚಿನ್ ಜೋಷಿ ಅವರನ್ನು ವಿಚಾರಣೆಗೊಳಪಡಿಸಲು ಅಧಿಕಾರಿಗಳು ಮುಂದಾಗಿದ್ದರು. ಈ ವಿಚಾರ ತಿಳಿದ ನಟ ಸಚಿನ್ ಜೋಷಿ ಮುಂಬೈ ಮೂಲಕ ದುಬೈಗೆ ಪರಾರಿಯಾಗಲು ಯತ್ನಿಸಿದ್ದರು ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಅವರನ್ನು ಹೈದರಾಬಾದ್ ನ ಸೈಬರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: