ಪ್ರಮುಖ ಸುದ್ದಿ

ಪೊಲೀಸರ ಮೇಲೆ ಹಲ್ಲೆ ಪ್ರಕರಣ : ಮಹಾರಾಷ್ಟ್ರ ಸಚಿವೆ ಯಶೋಮತಿ ಠಾಕೂರ್ ಗೆ ಮೂರು ತಿಂಗಳ ಜೈಲು

ದೇಶ(ಮುಂಬೈ)ಅ.16:- ಮಹಾರಾಷ್ಟ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಯಶೋಮತಿ ಠಾಕೂರ್ ಅವರಿಗೆ ಅಮರಾವತಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಶೋಮತಿ ಠಾಕೂರ್‌ಗೆ 3 ತಿಂಗಳ ಜೈಲು ಶಿಕ್ಷೆ ಮತ್ತು 15 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಲಾಗಿದೆ.
ಅಮರಾವತಿ ನ್ಯಾಯಾಲಯವು 8 ವರ್ಷದ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿ ಈ ಶಿಕ್ಷೆಯನ್ನು ವಿಧಿಸಿದೆ. 8 ವರ್ಷಗಳ ಹಿಂದೆ, ಯಶೋಮತಿ ಠಾಕೂರ್ ಅವರು ಅಮರಾವತಿ ಜಿಲ್ಲೆಯ ಅಂಬಾದೇವಿ ದೇವಸ್ಥಾನದ ಬಳಿ ಕರ್ತವ್ಯದಲ್ಲಿದ್ದ ಉಲ್ಹಾಸ್ ರೌರಲೆ ಎಂಬ ಪೊಲೀಸರನ್ನು ಥಳಿಸಿದ್ದರು. ಯಶೋಮತಿ ಠಾಕೂರ್ ಅವರಲ್ಲದೆ, ಕಾರು ಚಾಲಕ ಮತ್ತು ಮತ್ತಿಬ್ಬರು ಸಹ ಆರೋಪಿಗಳಾಗಿದ್ದಾರೆ.
ಯಶೋಮತಿ ಠಾಕೂರ್ ಅವರಲ್ಲದೆ, ಕಾರು ಚಾಲಕ ಮತ್ತು 2 ಕಾರ್ಯಕರ್ತರು ಸಹ ಶಿಕ್ಷೆಗೊಳಗಾಗಿದ್ದಾರೆ. ಈ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ನುಡಿದ ಓರ್ವ ಪೊಲೀಸಗೂ ಶಿಕ್ಷೆ ವಿಧಿಸಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: