ಮೈಸೂರು

ಹೆಚ್ ಡಿ ಕೋಟೆಯ ಮಿನಿವಿಧಾನಸೌಧದ ಬಳಿ‌ ಅರಿವು ಕಾರ್ಯಕ್ರಮ

ಮೈಸೂರು, ಅ.16:- ಕಾನೂನು ಸೇವೆಗಳ ಸಮಿತಿ ಹಾಗೂ ಪೋಲಿಸ್ ಇಲಾಖೆ ನೇತೃತ್ವದಲ್ಲಿ ಕೋವಿಡ್ ಜಾಥಾದ ಅರಿವು ಕಾರ್ಯಕ್ರಮ ಹೆಚ್.ಡಿ.ಕೋಟೆಯಲ್ಲಿ ನಡೆಯಿತು.
ಹೆಚ್ ಡಿ ಕೋಟೆ ಪಟ್ಟಣದ ಮಿನಿವಿಧಾನ ಸೌಧದ ಬಳಿ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ಪಟ್ಟಣದ ಹೆಚ್ ಡಿ ಕೋಟೆ ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಅಯೋಜಿಸಿದ್ದ ಕೋವಿಡ್ 19 ಅರಿವು ಜಾಥಾಕ್ಕೆ ನ್ಯಾಯಾಧೀಶ ಕೆಂಪರಾಜು ಅವರು ಚಾಲನೆ ನೀಡಿದರು. ಕಾರ್ಯಕ್ರಮ ಕುರಿತು ಹೆಚ್ ಡಿ ಕೋಟೆ ಪಟ್ಟಣದ ಪೊಲೀಸ್ ಠಾಣೆಯ ಪಿ ಎಸ್ ಐ ಎಂ ನಾಯಕ್ ಮಾತನಾಡಿ ಕೋವಿಡ್ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು ಸಾವು ನೋವುಗಳು ಕೂಡ ಸಂಭವಿಸುತ್ತಿದೆ. ಜನರು ಮತ್ತಷ್ಟು ಜಾಗೃತರಾಗಿ ಮಾಸ್ಕ್ ಅನ್ನು ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಮೂಲಕ ಕೊರೊನಾ ಮಹಾಮಾರಿಯನ್ನು ತಡೆಗಟ್ಟಬಹುದು ಎಂದರು.
ಜೊತೆಗೆ ಜಾಥಾ ಕಾರ್ಯಕ್ರಮದ ನಡುವೆ ರಸ್ತೆಯಲ್ಲಿ ಮಾಸ್ಕ್ ಧರಿಸದೇ ಇದ್ದವರಿಗೆ ದಂಡ ವಿಧಿಸಿ ಮಾಸ್ಕ್ ಅನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಿವಿಲ್ನ್ಯಾಯಾಧೀಶ ಮಹಮ್ಮದ್ ಶಾದ್ ಚೌತಾಯಿ, ತಹಶೀಲ್ದಾರ್ ಮಂಜುನಾಥ್, ಟಿ ಹೆಚ್ ಓ ರವಿಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ಪುಟ್ಟಸ್ವಾಮಿ , ಪುರಸಭೆ ಮುಖ್ಯಧಿಕಾರಿ ವಿಜಯ್ ಕುಮಾರ್ ವಕೀಲರಾದ ಸದಾಶಿವ ,ಸಂಗಮೇಶ್ವರ್, ಚಿಕ್ಕನಾಯಕ, ಇತರರು ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: