ಪ್ರಮುಖ ಸುದ್ದಿಮೈಸೂರು

ಗಜಪಡೆಯ ಯೋಗಕ್ಷೇಮ ವಿಚಾರಿಸಿ ಕಬ್ಬು ಬೆಲ್ಲ ತಿನ್ನಿಸಿದ ಸಚಿವ ಸೋಮಶೇಖರ್; ಆರ್.ಆರ್.ನಗರದಲ್ಲಿ ಡಿಕೆಶಿವಕುಮಾರ್ ಗೆಲ್ಲೋಕಾಗಲ್ಲ

ಮೈಸೂರು,ಅ.16:- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2020 ಕ್ಕೆ ನಾಳೆ ಬೆಳಿಗ್ಗೆ ವಿದ್ಯುಕ್ತ ಚಾಲನೆ ದೊರಕಲಿದ್ದು, ಮೈಸೂರು ಅರಮನೆ ಆವರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಭೇಟಿ ನೀಡಿದರು.
ಸಚಿವರು ಅಂಬಾರಿ ಹೊರಲಿರುವ ಅಭಿಮನ್ಯು ನೇತೃತ್ವದ ದಸರಾ ಗಜಪಡೆಯ ಯೋಗ ಕ್ಷೇಮವನ್ನು ಮಾವುತರ ಬಳಿ ವಿಚಾರಿಸಿದರು. ಮಾವುತರು, ಕಾವಾಡಿಗಳ ಸಮ್ಮುಖದಲ್ಲಿ ಗಜಪಡೆಗೆ ಕಬ್ಬು ಬೆಲ್ಲ ತಿನ್ನಿಸಿದರು.ಸಚಿವ ಸೋಮಶೇಖರ್ ಅವರಿಗೆ ಶಾಸಕರಾದ ಎಸ್. ಎ. ರಾಮದಾಸ್, ಎಲ್. ನಾಗೇಂದ್ರ, ಮುಡಾ ಅಧ್ಯಕ್ಷ ಎಚ್. ವಿ. ರಾಜೀವ್ ಸಾಥ್ ನೀಡಿದರು.
ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮ ವಿರುದ್ಧ ಎಫ್ ಐ ಆರ್ ವಿಚಾರವಾಗಿ ಡಿಕೆಶಿವಕುಮಾರ್ ಆಕ್ರೋಶ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು ಆರ್.ಆರ್.ನಗರದಲ್ಲಿ ಡಿಕೆಶಿವಕುಮಾರ್ ಗೆಲ್ಲೋಕಾಗಲ್ಲ. ಅದಕ್ಕೆ ಪಿಳ್ಳೆನೆಪ ಹುಡುಕಿಕೊಂಡು ಮಾತನಾಡುತ್ತಿದ್ದಾರೆ. ನೀತಿ ಸಂಹಿತೆ ಯಾರೇ ಉಲ್ಲಂಘನೆ ಮಾಡಿದರೂ ಎಫ್ ಐ ಆರ್ ಹಾಕುತ್ತಾರೆ. ಕಳೆದ ಬಾರಿ ಮುನಿರತ್ನ ಮೇಲೂ ಎಫ್ ಐ ಆರ್ ಹಾಕಿದ್ದರು. ಸ್ವಲ್ಪ ವ್ಯತ್ಯಾಸ ಆಗಿದ್ದರೆ ಮುನಿರತ್ನ ಜೈಲಿಗೆ ಹೋಗಬೇಕಿತ್ತು. ಈಗ ಕೋರ್ಟ್ ತೀರ್ಪು ಬಂದು ಮತ್ತೆ ಚುನಾವಣೆಗೆ ನಿಲ್ಲುತ್ತಿದ್ದಾರೆ. ಹೀಗಾಗಿ ಡಿಕೆಶಿವಕುಮಾರ್ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ಆರ್ ಆರ್ ನಗರದಲ್ಲಿ ಗೆಲ್ಲೋಕೆ ಆಗಲ್ಲ ಅಂತ ಹೀಗೆಲ್ಲ ಮಾತನಾಡುತ್ತಾರೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: