ಮೈಸೂರು

ಮನೆಯಲ್ಲೇ ಇದ್ದು ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸುವಂತೆ ಡಾ.ಶಶಿಶೇಖರ್ ದೀಕ್ಷಿತ ಮನವಿ

ಮೈಸೂರು,ಅ.16:- ವಿಶ್ವವಿಖ್ಯಾತ ಮೈಸೂರು ದಸರಾ 2020 ನಾಳೆ ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ. ನಾಳೆ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನೆರವೇರಲಿದೆ.
ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಈ ಕುರಿತು ಪ್ರತಿಕ್ರಿಯಿಸಿ ಎಂದಿನಂತೆ ಬ್ರಾಹ್ಮಿ ಮೂರ್ಹೂತದಲ್ಲಿ ಬೆಳಿಗ್ಗೆ ಚಾಮುಂಡೇಶ್ವರಿಗೆ ಪೂಜೆ ನೆರವೇರಲಿದೆ. ರುದ್ರಾಭಿಷೇಕ,ಮಹಾನ್ಯಾಸ ಸೇರಿದಂತೆ ವಿವಿಧ ಪೂಜೆ ಕೈಂಕರ್ಯಗಳು ಎಂದಿನಂತೆ ನೆರವೇರಲಿವೆ. ನಂತರ ಸಂಪ್ರದಾಯದಂತೆ ಸರಳವಾಗಿ ನಾಡಹಬ್ಬಕ್ಕೆ ಚಾಲನೆ ದೊರೆಯಲಿದೆ ಎಂದರು.
7.45 ರಿಂದ 8.15 ರ ಶುಭಮೂಹರ್ತದಲ್ಲಿ ನಾಡದೇವಿ ಮೂರ್ತಿಗೆ ಪುಷ್ಪಾರ್ಚನೆಯಾಗಲಿದೆ. ಸಾರ್ವಜನಿಕರು ಎಲ್ಲರೂ ಸಹಕರಿಸಬೇಕು. ಮನೆಯಲ್ಲೇ ಇದ್ದು ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿ ಎಂದು ಮನವಿ ಮಾಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: