ಮೈಸೂರು

ಅರಮನೆಯಲ್ಲಿ ಪಟ್ಟದ ಆನೆಗಳಿಗೆ ಅಲಂಕಾರ

ಮೈಸೂರು,ಅ.17:- ವಿಶ್ವ ವಿಖ್ಯಾತ ಮೈಸೂರು ದಸರಾ 2020 ಹಿನ್ನೆಲೆ ಅರಮನೆಯಲ್ಲಿ ಪಟ್ಟದ ಆನೆಗಳಿಗೆ ಅಲಂಕಾರ ಮಾಡಲಾಗುತ್ತಿದೆ.
ಬಣ್ಣದಿಂದ ವಿಕ್ರಮ ಮತ್ತು ಗೋಪಿ ಆನೆಗೆ ಅಲಂಕಾರ ಮಾಡಲಾಗಿದ್ದು, ಸೊಂಡಿಲಿನ ಭಾಗಕ್ಕೆ ಗಂಡಭೇರುಂಡ ಚಿಹ್ನೆ , ಕಾಲಿಗೆ ಹೂ ಸಹಿತ ಲತೆಯ ಚಿತ್ರವನ್ನು ಬರೆಯಲಾಗಿದೆ. ಅಲಂಕಾರದ ನಂತರ ಕಳಸ ಪೂಜೆಯಲ್ಲಿ ಆನೆಗಳು ಭಾಗಿಯಾಗಲಿವೆ. ಕೋಡಿ ಸೋಮೇಶ್ವರ ದೇವಾಲಯದಿಂದ ಪಟ್ಟದ ಆನೆ, ಪಟ್ಟದ ಕುದುರೆ, ಒಂಟೆ, ಪಟ್ಟದ ಹಸುವನ್ನು ಸವಾರಿ ತೊಟ್ಟಿಗೆ ಕರೆತರಲಾಗುವುದು. ಸವಾರಿ ತೊಟ್ಟಿಯಲ್ಲಿ ಪೂಜೆ ಕೈಂಕರ್ಯ ಕಾರ್ಯದಲ್ಲಿ ಭಾಗಿಯಾಗಲಿವೆ. ನಂತರ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: