ಮೈಸೂರು

ಮರ ಬಿದ್ದು ದ್ವಿಚಕ್ರ ವಾಹನ ಜಖಂ

ನಗರದ ಎನ್ಐಇ ಹಾಸ್ಟೇಲ್ ಸಮೀಪ ದ್ವಿಚಕ್ರ ವಾಹನದ ಮೇಲೆ ಮರ ಉರುಳಿದ ಪರಿಣಾಮ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು ಸವಾರೆ ಸೌಮ್ಯ ಪವಾಡ ಸದೃಶ ಪಾರಾದ ಘಟನೆ ಸೋಮವಾರ ನಡೆದಿದೆ.

ಜೆಪಿ ನಗರ ನಿವಾಸಿ ಸೌಮ್ಯಾ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಅದೇ ವೇಳೆ ಸಮೀಪದ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಆದರೆ ಸೌಮ್ಯಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಾರ್ವಜನಿಕರು ಘಟನೆ ಕುರಿತಂತೆ ಸಂಬಂಧಪಟ್ಟವರಿಗೆ ಹಿಡಿಶಾಪ ಹಾಕಿದ್ದಾರೆ.

Leave a Reply

comments

Related Articles

error: