ಪ್ರಮುಖ ಸುದ್ದಿಮನರಂಜನೆ

ಧರ್ಮದ ಆಧಾರದ ಮೇಲೆ ದ್ವೇಷವನ್ನು ಹರಡಿದ ಆರೋಪ : ಬಾಲಿವುಡ್ ನಟಿ ಕಂಗನಾ ರಾಣಾವತ್ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ

ದೇಶ(ಮುಂಬೈ)ಅ.17:- ಬಾಲಿವುಡ್ ನಟಿ ಕಂಗನಾ ರಾಣಾವತ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮುಂಬೈನ ಬಾಂದ್ರಾ ನ್ಯಾಯಾಲಯ ಆದೇಶಿಸಿದೆ.
ಕಂಗನಾ ರಾಣಾವತ್ ಅವರು ಕೋಮು ದ್ವೇಷವನ್ನು ಹರಡಿದ್ದಾರೆ ಎಂಬ ಆರೋಪವಿದೆ, ಈ ಕಾರಣದಿಂದಾಗಿ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೇಳಿಕೊಳ್ಳಲಾಗಿದೆ.
ಮೊಹಮ್ಮದ್ ಸಾಹಿಲ್ ಅಶ್ರಫ್ ಅಲಿ ಸಯ್ಯ ಎಂಬ ವ್ಯಕ್ತಿ ಕಂಗನಾ ವಿರುದ್ಧ ಮುಂಬೈನ ಬಾಂದ್ರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಕಂಗನಾ ರಾಣಾವತ್ ಅವರು ಬಾಲಿವುಡ್ನಲ್ಲಿ ಹಿಂದೂ-ಮುಸ್ಲಿಂ ಸಮುದಾಯದಲ್ಲಿ ಜಗಳವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಕಂಗನಾ ಎರಡು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಕೆಲಸ ಮಾಡುತ್ತಿದ್ದಾರೆ. ನಟಿ ಕಂಗನಾ ಕೋಮುವಾದವನ್ನು ಉತ್ತೇಜಿಸಿದ ಆರೋಪವಿದೆ. ಈ ಕಾರಣದಿಂದಾಗಿ ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸಲು ಬಾಂದ್ರಾ ನ್ಯಾಯಾಲಯದಲ್ಲಿ ಆದೇಶ ನೀಡಲಾಗಿದೆ.

ಈ ವ್ಯಕ್ತಿಯು ಕಂಗನಾ ಅವರ ಟ್ವೀಟ್ಗಳನ್ನು ಕೂಡ ನ್ಯಾಯಾಲಯದಲ್ಲಿ ಇಟ್ಟಿದ್ದು, ಸಿಆರ್ಪಿಸಿಯ ಸೆಕ್ಷನ್ 156 (3) ರಂತೆ ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸಬಹುದು. ಎಫ್ಐಆರ್ ನಂತರ ಕಂಗನಾಳನ್ನು ಪ್ರಶ್ನಿಸಲಾಗುವುದು ಮತ್ತು ಕಂಗನಾ ವಿರುದ್ಧ ಬಲವಾದ ಪುರಾವೆಗಳಿದ್ದರೆ ಅವರ ಬಂಧನ ಕೂಡ ಆಗಬಹುದು ಎನ್ನಲಾಗುತ್ತಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: