ಪ್ರಮುಖ ಸುದ್ದಿಮನರಂಜನೆ

ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪುತ್ರನ ಮೇಲೆ ಅತ್ಯಾಚಾರ ಪ್ರಕರಣ ದಾಖಲು

ದೇಶ(ಮುಂಬೈ)ಅ.17:- ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರ ಪುತ್ರ ಮಹಾ ಅಕ್ಷಯ್ ಅಲಿಯಾಸ್ ಮಿಮೋಹ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ.
ದೂರುದಾರ ಮಹಿಳೆ ಮಿಮೋಹ್ ಅವರ ತಾಯಿ (ಮಿಥುನ್ ಅವರ ಪತ್ನಿ) ಮತ್ತು ಮಾಜಿ ನಟಿ ಯೋಗಿತಾ ಬಾಲಿಯನ್ನು ಸಹ ಆರೋಪಿಗಳನ್ನಾಗಿ ಮಾಡಿದ್ದಾರೆ.
ದೂರುದಾರ ಮಹಿಳೆ 2015 ರಿಂದ ಮಿಮೋಹ್ ಜೊತೆ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದು, ಮಿಮೋಹ್ ಅವಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ನಂತರ ನಿರಾಕರಿಸಿದ. ಮಿಮೋಹ್ ತನ್ನನ್ನು ತನ್ನ ಮನೆಗೆ ಕರೆದು ಬಲವಂತವಾಗಿ ಪಾನೀಯ ನೀಡುವ ಮೂಲಕ ದೈಹಿಕ ಸಂಬಂಧ ಬೇಳೆಸಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.
ತಾನು ಗರ್ಭಿಣಿಯಾದಾಗ ಮಿಮೋಹ್ ಗರ್ಭಪಾತ ಮಾಡಬೇಕೆಂದು ಒತ್ತಾಯಿಸಿದ್ದ. ನಿರಾಕರಿಸಿದಾಗ ಆತ ತನಗೆ ಕೆಲವು ಮಾತ್ರೆಗಳನ್ನು ಕೊಟ್ಟಿದ್ದು,ಅದು ಗರ್ಭಪಾತಕ್ಕೆ ಕಾರಣವಾಯಿತು ಎಂದು ಮಹಿಳೆ ಆರೋಪಿಸಿದ್ದಾರೆ. ಪೊಲೀಸ್ ರಿಗೆ ದೂರು ನೀಡಲು ಹೊರಟಿದ್ದಾಗ ಮಿಮೋಹ್ ತಾಯಿ ತನಗೆ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.
36 ವರ್ಷದ ಮಿಮೋಹ್ 2018 ರಲ್ಲಿ ಟಿವಿ ನಟಿ ಮದಾಲಸಾ ಶರ್ಮಾ ಅವರನ್ನು ವಿವಾಹವಾದರು. ಮಿಮೋಹ್ 2008 ರಲ್ಲಿ ‘ಜಿಮ್ಮಿ’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ‘ಹಾಂಟೆಡ್ 3 ಡಿ’, ‘ಲೂಟಿ’ ಮತ್ತು ‘ಇಷ್ಕೆದಾರಿಯಾ’ ಚಿತ್ರಗಳಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: