ಕರ್ನಾಟಕಮನರಂಜನೆ

ಪ್ರೀತಿಯ ಪತಿಗೆ ಮೇಘನಾ ರಾಜ್ ರಿಂದ ಭಾವುಕ ಶುಭಾಶಯ

ಬೆಂಗಳೂರು,ಅ.17-ಇಂದು ನಟ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ. ಅವರ ನಿಧನರಾದ ನಂತರ ಮೊದಲನೇ ಹುಟ್ಟುಹಬ್ಬವಿದು. ಪತಿ ಇಲ್ಲದ ನೋವಿನಲ್ಲಿದ್ದರೂ ಹೊಸ ಹುಟ್ಟಿನ ನಿರೀಕ್ಷೆಯಲ್ಲಿರುವ ಗರ್ಭಿಣಿ ಮೇಘನಾ ರಾಜ್ ಪ್ರೀತಿಯ ಪತಿಗೆ ಭಾವುಕವಾಗಿ ಶುಭಾಶಯ ಕೋರಿದ್ದಾರೆ.

ಇನ್ ಸ್ಟಾಗ್ರಾಮ್ ನಲ್ಲಿ ಚಿರು ಫೋಟೋವನ್ನು ಹಂಚಿಕೊಂಡು ‘ನನ್ನ ಜಗತ್ತಿಗೆ ಹುಟ್ಟುಹಬ್ಬದ ಶುಭಾಶಯ, ಸದಾ ನಿನ್ನನ್ನು ಪ್ರೀತಿಸುವೆ’ ಎಂದಿದ್ದಾರೆ.

ಚಿರು ಅವರ ಮಾವ ನಟ ಅರ್ಜುನ್ ಸರ್ಜಾ, 36 ವರ್ಷಗಳ ಹಿಂದೆ ನೀನು ಹುಟ್ಟಿದಾಗ ನಾನು ಸಂತೋಷದಿಂದ ಕುಣಿದಾಡಿದ್ದೆ ಮಗನೇ. ವಿಧಿಯ ಕ್ರೌರ್ಯವನ್ನು ನಂಬಲು ಸಾಧ್ಯವಿಲ್ಲ… ನಿನ್ನ ಹುಟ್ಟುಹಬ್ಬದಂದು ನಾನು ಈ ಮಾತುಗಳನ್ನು ಬರೆಯುತ್ತೇನೆ ಎಂದು ನನ್ನ ಹುಚ್ಚು ಕನಸಿನಲ್ಲಿ ಎಂದಿಗೂ ಯೋಚಿಸಲಿಲ್ಲ.. ಯಾವಾಗಲೂ ನಿನ್ನ ಆಲೋಚನೆಯಲ್ಲಿಯೇ ಕಾಲ ಕಳೆಯುತ್ತೇವೆ ಮಗನೇ. ಲವ್​ ಯೂ ಸೋ ಮಚ್​ ಬೇಬಿ’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಧ್ರುವ ಸರ್ಜಾ ಅವರು ನಿನ್ನೆಯೇ ಶುಭಕೋರಿದ್ದು, ಮೇಘನಾ ರಾಜ್ ಅವರ ಸೀಮಂತದ ವಿಶೇಷವಾಗಿ ಆಯೋಜಿಸಿದ್ದ ಕಾರ್ಯಕ್ರಮದ ವಿಡಿಯೋ ಹಂಚಿಕೊಂಡು ಶೀಘ್ರದಲ್ಲೇ ಜೂನಿಯರ್ ಚಿರು ಬರ್ತಿದ್ದಾನೆ ಎಂದಿದ್ದಾರೆ.

ಸರ್ಜಾ ಕುಟುಂಬಕ್ಕೆ ಹೊಸ ಜೀವವನ್ನು ಸ್ವಾಗತಿಸುವ ಸಲುವಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅರ್ಜುನ್ ಸರ್ಜಾ ಸೇರಿದಂತೆ ಇಡೀ ಕುಟುಂಬ ಭಾಗಿಯಾಗಿತ್ತು. ಈ ಸಂದರ್ಭದಲ್ಲಿ ಕೇಕ್ ಕತ್ತರಿಸುವ ಮೂಲಕ ಮೇಘನಾ ರಾಜ್ ಜೂನಿಯರ್ ಚಿರುಗೆ ಸ್ವಾಗತ ಕೋರಿದ್ದಾರೆ. ಅರ್ಜುನ್ ಸರ್ಜಾ ಸಹ ಹ್ಯಾಪಿ ವೆಲ್‌ಕಮ್ ಚಿರು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಚಿರಂಜೀವಿ ಸರ್ಜಾ ಅಭಿನಯದ ಸಿನಿಮಾ ಶಿವಾರ್ಜುನ ಮತ್ತೊಮ್ಮೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದು, ಇಂದು ಸಂತೋಷ್ ಚಿತ್ರಮಂದಿರದ ಎದುರು ಚಿರಂಜೀವಿ ಸರ್ಜಾ ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ.

ಜೂನ್ 7 ರಂದು ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದರು. ಚಿರು ಸರ್ಜಾ ಅವರನ್ನು ಕಳೆದುಕೊಂಡು ನೋವಿನಲ್ಲಿ ಕೈ ತೊಳೆಯುತ್ತಿರುವ ಸರ್ಜಾ ಕುಟುಂಬಕ್ಕೆ ಈ ಮಗು ಸಂತಸ ನೀಡಲಿದೆ. ಚಿರು ಸರ್ಜಾ ಮತ್ತೆ ಮೇಘನಾ ಅವರ ಹೊಟ್ಟೆಯಲ್ಲಿ ಮಗುವಾಗಿ ಜನಿಸಲಿದ್ದಾರೆ ಎಂಬ ನಂಬಿಕೆಯಲ್ಲಿ ಕುಟುಂಬ ಹಾಗೂ ಅಭಿಮಾನಿಗಳು ಇದ್ದಾರೆ. ಇಂದೇ ಜೂ.ಚಿರು ನಿರೀಕ್ಷೆಯಲ್ಲಿ ಸರ್ಜಾ ಕುಟುಂಬ ಇದೆ. (ಎಂ.ಎನ್)

Leave a Reply

comments

Related Articles

error: