ಕ್ರೀಡೆ

ಭಾರತದ ಸ್ಟಾರ್ ಮಹಿಳಾ ಕ್ರಿಕೆಟ್ ಆಟಗಾರ್ತಿಗೆ ಕೋವಿಡ್ ಸೋಂಕು : ಟಿ 20 ಚಾಲೆಂಜರ್ ನಿಂದ ಹೊರಕ್ಕೆ

ದೇಶ(ನವದೆಹಲಿ)ಅ.17:- ಕೋವಿಡ್ 19 ರ ಕಾರಣದಿಂದಾಗಿ ಕ್ರಿಕೆಟ್ ಸಂಕಟ ಮುಂದುವರೆದಿದೆ. ಕೋವಿಡ್ ತಪಾಸಣೆಯಲ್ಲಿ ಭಾರತೀಯ ಮಹಿಳಾ ತಂಡದ ವೇಗದ ಬೌಲರ್ ಮಾನ್ಸಿ ಜೋಶಿಗೆ ಕೋವಿಡ್ -19 ಪಾಸಿಟಿವ್ ದೃಢಪಟ್ಟಿದೆ.
ಕೋವಿಡ್ 19 ವರದಿ ಪಾಸಿಟಿವ್ ಬಂದ ಕಾರಣ ಮುಂದಿನ ತಿಂಗಳು ಯುಎಇಯಲ್ಲಿ ನಡೆಯಲಿರುವ ಮಹಿಳಾ ಟಿ 20 ಚಾಲೆಂಜರ್ನಲ್ಲಿ ಮಾನ್ಸಿ ಜೋಶಿ ಭಾಗವಹಿಸುವುದಿಲ್ಲ.
ಕೊರೋನಾ ವೈರಸ್ ಟೆಸ್ಟ್ ವರದಿ ಪಾಸಿಟಿವ್ ಬಂದ ನಂತರ 27 ವರ್ಷದ ಮಾನ್ಸಿ ಡೆಹ್ರಾಡೂನ್ ನಲ್ಲಿ ಐಸೋಲೇಶನ್ ನಲ್ಲಿದ್ದಾರೆ. ಟಿ 20 ಚಾಲೆಂಜರ್ನಲ್ಲಿ ಭಾಗವಹಿಸುವ ಇತರ ಭಾರತೀಯ ಆಟಗಾರರು ಅ.13ರಂದು ಮುಂಬೈಗೆ ತೆರಳಿದ್ದರು.
ಮಾನ್ಸಿ ಬದಲಿಗೆ ಮಿಥಾಲಿ ರಾಜ್ ನೇತೃತ್ವದ ವೆಲೊಸಿಟಿ ತಂಡದಲ್ಲಿ 26 ವರ್ಷದ ವೇಗದ ಬೌಲರ್ ಮೇಘನಾ ಸಿಂಗ್ ಅವರನ್ನು ಸೇರಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ. ಮಾನ್ಸಿ 2016 ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದಾಗಿನಿಂದ 11 ಏಕದಿನ ಮತ್ತು ಎಂಟು ಟಿ 20 ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
ಕೋವಿಡ್ 19 ರ ಕಾರಣ, ಫೆಬ್ರವರಿ ನಂತರ ಭಾರತದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲಾಗಿಲ್ಲ. ಆದರೆ ಈಗ ಬಿಸಿಸಿಐ ಭಾರತದಲ್ಲಿ ಕ್ರಿಕೆಟ್ ಚಟುವಟಿಕೆಗಳನ್ನು ಚುರುಕುಗೊಳಿಸಿದೆ.
ಬಿಸಿಸಿಐ ಶನಿವಾರ ಅಪೆಕ್ಸ್ ಕೌನ್ಸಿಲ್ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ದೇಶೀಯ ಕ್ರಿಕೆಟ್ಗೆ ಮರಳುವ ಕಾರ್ಯಸೂಚಿಯನ್ನು ಮಂಡಳಿ ನಿರ್ಧರಿಸಲಿದೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: