ಕರ್ನಾಟಕಮನರಂಜನೆ

ಅಪ್ಪನಾಗೋ ಸಂಭ್ರಮವನ್ನು ಮೊದಲೇ ಅನುಭವಿಸಿದ್ದ ಚಿರಂಜೀವಿ ಸರ್ಜಾ.!

ಬೆಂಗಳೂರು,ಅ.17-ಇಂದು ನಟ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ. ತಮ್ಮ ಪ್ರೀತಿಯ ಮಗುವನ್ನೂ ನೋಡುವ ಮುಂಚೆಯೇ ಚಿರು ಇಹಲೋಕ ತ್ಯಜಿಸಿದರು. ಈ ನೋವು ಪ್ರೀತಿಯ ಪತ್ನಿ, ಸರ್ಜಾ ಕುಟುಂಬ ಹಾಗೂ ಅಭಿಮಾನಿಗಳಿಗೆ ಇದೆ.

ಆದರೆ ಚಿರು ಅಪ್ಪನಾಗೋ ಸಂಭ್ರಮದ ಘಳಿಗೆಯನ್ನ ಸಾವಿಗೂ ಮೊದಲೇ ಅನುಭವಿಸಿದ್ದರು.! ಚಿರು ಪುಟ್ಟ ಮಗುವನ್ನು ಎತ್ತಿಕೊಂಡು ಮುದ್ದಾಡಿದ್ದಾರೆ. ಸಂಭ್ರಮದಲ್ಲಿ ಕೇಕ್ ತಿನ್ನಿಸಿದ್ದಾರೆ. ರಿಯಲ್ ಲೈಫ್​ನಲ್ಲಿ ಚಿರು ಅನುಭವಿಸಲಾಗದ್ದು ರೀಲ್ ನಲ್ಲಿ ಆಗಿದೆ. ಈ ದೃಶ್ಯಗಳು ಮನಕಲಕುವಂತಿವೆ.

ಚಿರು ಹುಟ್ಟುಹಬ್ಬದ ಅಂಗವಾಗಿ ಅವರ ಅಭಿನಯದ ‘ಕ್ಷತ್ರಿಯ’ ಸಿನಿಮಾದ ಟೀಸರ್​​ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಅದರಲ್ಲಿ ಚಿರು ಅಪ್ಪನಾಗಿರುವ ಸಂಭ್ರಮವನ್ನು ಅನುಭವಿಸಿರುವುದು ನೋಡಬಹುದು.

ಟೀಸರ್ ರಿಲೀಸ್ ಮಾಡುವ ಮೂಲಕ ಶುಭಕೋರಿರುವ ಚಿತ್ರತಂಡ ‘ನಮ್ಮೊಂದಿಗೆ, ನಿಮ್ಮೊಂದಿಗೆ, ಎಂದೆಂದಿಗೂ ಇರೋ ಚಿರಂಜೀವಿ ಸರ್ಜಾ ಚಿರಂಜೀವಿನೇ’ ಹುಟ್ಟುಹಬ್ಬದ ಶುಭಾಶಯಗಳು ಯುವ ಸಾಮ್ರಾಟ್ ಎಂದು ಹೇಳಿದೆ.

ಕ್ಷತ್ರಿಯ ಸಿನಿಮಾದಲ್ಲಿ ಚಿರಂಜೀವಿ ಸರ್ಜಾ ಪಾತ್ರಕ್ಕೆ ಧೃವ ಸರ್ಜಾ ಧ್ವನಿ ನೀಡಿದ್ದಾರೆ. ಸಿನಿಮಾದ ಡಬ್ಬಿಂಗ್ ಪ್ರಾರಂಭವಾಗುವ ವೇಳೆಗೆ ಚಿರು ಸರ್ಜಾ ನಿಧನವಾಗಿದ್ದರು, ಹಾಗಾಗಿ ಧೃವ ಸರ್ಜಾ ಸಿನಿಮಾಕ್ಕೆ ಡಬ್ಬಿಂಗ್ ಮಾಡಿದ್ದಾರೆ.

ಎ.ವೆಂಕಟೇಶ್ ಅವರು ಕ್ಷತ್ರಿಯ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿನಿಮಾದ ನಿರ್ದೇಶನ ಮಾಡಿರುವುದು ಅನಿಲ್ ಮಂಡ್ಯ. ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಕೊನೆಯ ಕೆಲವು ಭಾಗವಷ್ಟೆ ಬಾಕಿ ಇದೆಯಂತೆ. ಚಿರು ಇಲ್ಲದೆ ಈ ಭಾಗವನ್ನು ಹೇಗೆ ಮುಗಿಸುತ್ತಾರೆ ಎಂಬುದು ಕಾದು ನೋಡಬೇಕಿದೆ. (ಎಂ.ಎನ್)

Leave a Reply

comments

Related Articles

error: