ಮೈಸೂರು

ಇಬ್ಬರು ಮಕ್ಕಳನ್ನು ಕೊಂದು ಮಹಿಳೆ ನೇಣಿಗೆ ಶರಣು

ಮೈಸೂರು,ಅ,17:- ಮೊಬೈಲ್ ವಿಚಾರ ಸಂಬಂಧ ಪತಿ- ಪತ್ನಿ ನಡುವೆ ನಡೆದ ಕಲಹ ಕೊನೆಗೆ ಇಬ್ಬರು ಮುದ್ದು ಮಕ್ಕಳು ಸೇರಿದಂತೆ ಮೂವರ ಸಾವಿನಲ್ಲಿ ಅಂತ್ಯ ಕಂಡಿದೆ.
ಗಾಯತ್ರಿಪುರಂ ಬಡಾವಣೆಯಲ್ಲಿ ಈ ದುರ್ಘಟನೆ ನಡೆದಿದ್ದು, ಪತಿಯ ಮಾತಿನಿಂದ ಬೇಸತ್ತ ಪತ್ನಿ ತನ್ನ ಇಬ್ಬರು ಮಕ್ಕಳನ್ನು ಕೊಂದು ಬಳಿಕ ತಾನೂ ನೇಣಿಗೆ ಕೊರಳೊಡ್ಡಿದ್ದಾಳೆ.
ಮೈಸೂರಿನ ಗಾಯತ್ರಿಪುರಂನ ಮುಜಾಮಿಲ್ ಎಂಬಾತ ಸೂಫಿಯಾಳನ್ನು ಮದುವೆಯಾಗಿದ್ದ. ಇವರಿಗೆ 3 ವರ್ಷದ ಮುನೇಜಾ ಮತ್ತು ಒಂದು ವರ್ಷದ ಇನಯಾ ಎಂಬ ಇಬ್ಬರು ಮಕ್ಕಳಿದ್ದರು.
ಪತ್ನಿ ಸೂಫಿಯಾ ಅತಿಯಾಗಿ ಮೊಬೈಲ್ ಬಳಸುತ್ತಿದ್ದಳು. ಈ ವಿಚಾರವಾಗಿ ಪತಿ ಮುಜಾಮಿಲ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದ. ಈ ವಿಚಾರವಾಗಿ ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಕಳೆದ ಎರಡು ದಿನದ ಹಿಂದೆ ಮುಜಾಮಿಲ್ ಪತ್ನಿಯಿಂದ ಮೊಬೈಲ್ ಕಿತ್ತುಕೊಂಡಿದ್ದ. ಈ ಬಗ್ಗೆ ಇಬ್ಬರ ಜಗಳ ಅತಿರೇಕಕ್ಕೆ ಹೋಗಿತ್ತು. ಮುಜಾಮಿಲ್ ಖಾಸಗಿ ಕಂಪನಿಯಲ್ಲಿ ಡಿಪ್ಲೋಮೊ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಇಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸೂಫಿಯಾ ಮಕ್ಕಳಾದ ಮುನೇಜಾ ಮತ್ತು ಇನಯಾಳನ್ನು ಕೊಂದು ನೇಣು ಬಿಗಿದುಕೊಂಡು ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈ ಸಂಬಂಧ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: