ಮೈಸೂರು

ದಸರಾ ಪ್ರಯುಕ್ತ ಗಜಪಡೆಗೆ ಮರದ ಅಂಬಾರಿ ತಾಲೀಮು

ಮೈಸೂರು,ಅ.18:- ನಾಡಹಬ್ಬ ದಸರಾ ಮಹೋತ್ಸವದ ಹಿನ್ನಲೆಯಲ್ಲಿ ಇಂದಿನಿಂದ ಗಜಪಡೆಗೆ ಮರದ ಅಂಬಾರಿ ಹೊರಿಸಿ ತಾಲೀಮು ಪ್ರಾರಂಭಿಸಲಾಗಿದ್ದು, ಅರಮನೆ ಆವರಣದಲ್ಲಿ ಅಭಿಮನ್ಯು ಆನೆ ನೇತೃತ್ವದ ಗಜಪಡೆ ಮರದ ಅಂಬಾರಿ ಹೊತ್ತು ಗಾಂಭೀರ್ಯದ ಹೆಜ್ಜೆ ಹಾಕಿದವು.
ನವರಾತ್ರಿ 2ನೇ ದಿನವಾದ ಇಂದು ಅರಮನೆಯಲ್ಲಿ ವಿವಿಧ ಪೂಜಾ ಕೈಂಕರ್ಯ ನಡೆಯುತ್ತಿದೆ.ಈ ಮಧ್ಯೆ ಇಂದಿನಿಂದ ಮರದ ಅಂಬಾರಿ ತಾಲೀಮು ಸಹ ನಡೆಯುತ್ತಿದೆ. ಇಷ್ಟು ದಿನ ಮರಳು ಮೂಟೆ ಭಾರ ಹೊರಿಸಿ ಆನೆಗಳಿಗೆ ತಾಲೀಮು ನೀಡಲಾಗುತ್ತಿತ್ತು.ಸಂಪ್ರದಾಯದಂತೆ ಇಂದಿನಿಂದ ಮರದ ಅಂಬಾರಿ ಹೊರಿಸಿ ತಾಲೀಮು‌ ನಡೆಸಲಾಗಿದ್ದು, ಅರಮನೆ ಆವರಣದ ಒಳಗೆ ತಾಲೀಮು ಮಾಡಿಸಲಾಗಿದೆ.
ಕೋವಿಡ್ ಹಿನ್ನಲೆಯಲ್ಲಿ ಸರಳಾ ದಸರಾಗೆ ಆದ್ಯತೆ ನೀಡಲಾಗಿದ್ದು, ಈ ಬಾರಿ ಜಂಬೂ ಸವಾರಿ ಅರಮನೆ ಆವರಣದ ಒಳಗೆ ಮಾತ್ರ ಸೀಮಿತವಾಗಿರುತ್ತದೆ.
ಅಲ್ಲದೇ ಅರಮನೆಯಲ್ಲಿ ನವರಾತ್ರಿ ಪೂಜೆ ನಡೆಯುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ತಾಲೀಮಿನಲ್ಲಿ ಪಾಲ್ಗೊಂಡಿರುವ ಗಜಪಡೆಗೆ ಹಾಗೂ ಮಾವುತರು, ಕಾವಾಡಿಗರಿಗೆ ದಿನಂಪ್ರತಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದ್ದು,ಎಲ್ಲರೂ ಆರೋಗ್ಯದಿಂದಿದ್ದಾರೆ ಎಂದು ಡಾ.ನಾಗರಾಜ್ ತಿಳಿಸಿದ್ದಾರೆ.
ಒಟ್ಟಾರೆ ಸರಳವಾಗಿ ನಾಡಹಬ್ಬ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ಜಿಲ್ಲಾಡಳಿತ ಮುಂದಾಗಿದ್ದು,ಅರಮನೆ ಯಲ್ಲಿ ಎರಡನೇ ದಿನದ ಪೂಜಾ ವಿಧಿ ವಿಧಾನಗಳು ಸಹ ನಡೆದಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: