ಮೈಸೂರು

ಪ್ರಜಾವಾಣಿ ವರದಿಗಾರ ಪವನ್ ಹೆತ್ತೂರು ಕೋವಿಡ್ ಗೆ ಬಲಿ

ಮೈಸೂರು,ಅ.18:- ಪ್ರಜಾವಾಣಿ, ವಿಜಯವಾಣಿ, ಕಸ್ತೂರಿ ಟಿವಿಯಲ್ಲಿ ಕೆಲಸ ಮಾಡಿದ್ದ ಉತ್ಸಾಹಿ ಪತ್ರಕರ್ತ ಪವನ್ ಹೆತ್ತೂರು (35) ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

ಮೈಸೂರು ಪ್ರಜಾವಾಣಿ ಬ್ಯೂರೋ ದಲ್ಲಿ ಕೆಲಸ ಮಾಡುತ್ತಿದ್ದ ಪವನ್, ಪತ್ನಿ, ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ. ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪವನ್ ಅವರಿಗೆ ಆರೋಗ್ಯ ಪರಿಸ್ಥಿತಿ ಗಂಭೀರವಾಗಿ, ಚಿಕಿತ್ಸೆಗೆ ಸ್ಪಂಧಿಸಲಿಲ್ಲ. ರಾತ್ರಿ 1.30 ಸುಮಾರಿಗೆ ಕೊನೆಯುಸಿರೆಳೆದರು. ಪವನ್ ಬದುಕಿ ಬರಲೆಂದು ಪ್ರಾರ್ಥಿಸಿದ್ದು ಪ್ರಯೋಜನವಾಗಲಿಲ್ಲ.

ಮೃತರ ಅಂತ್ಯಕ್ರಿಯೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರಿನಲ್ಲಿ ನಡೆಯಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: