ಮೈಸೂರು

ಕೊರೋನಾ ಜೊತೆಗೆ ಶಾಲಾ ಬದುಕು ಕೃತಿ ಲೋಕಾರ್ಪಣೆ

ಮೈಸೂರು,ಅ.18:- ಜ್ಞಾನವರ್ಧಿನಿ ಎಜುಕೇಷನಲ್ ಟ್ರಸ್ಟ್ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ “ ಕೊರೋನಾ ಜೊತೆಗೆ ಶಾಲಾ ಬದುಕು ” ಎಂಬ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಶಾಲಾಬದುಕು ಕೃತಿಯನ್ನು
ವಿಧಾನಪರಿಷತ್ತಿನ ಸದಸ್ಯರೂ ಹಾಗೂ ಮಾಜಿ ಸಚಿವರಾದ ಅಡಗೂರು ಹೆಚ್ ವಿಶ್ವನಾಥ್ ಅವರು ಲೋಕಾರ್ಪಣೆಗೊಳಿಸಿದರು.

ಶಿಕ್ಷಣ ತಜ್ಞ ಲೇಖಕ , ಕವಿ ಹಾಗೂ ಪ್ರಾಂಶುಪಾಲರಾದ ಡಾ.ಪ್ರಸನ್ನ ಹೆಗಡೆಯವರು ರಚಿಸಿದ್ದು , ಈ ಕೃತಿಯನ್ನು ಶಿಕ್ಷಣ ಮಂತ್ರಿಗಳಾದ ಸುರೇಶ್ ಕುಮಾರ್‌ ಅವರಿಗೂ ಹಾಗೂ ಕಾರ್ಮಿಕ ಹಾಗೂ ಸಕ್ಕರೆ ಖಾತೆಯ ಸಚಿವರಾದ ಶಿವರಾಮ ಹೆಬ್ಬಾರ ಅವರಿಗೂ ಅರ್ಪಣೆ ಮಾಡಲಾಗಿದೆ .

ಪ್ರಸ್ತುತ ವಿಶ್ವದಾದ್ಯಂತ ಹರಡುತ್ತಿರುವ ಮಹಾರೋಗ ಕೊರೊನಾದಿಂದ ವಿದ್ಯಾರ್ಥಿಗಳನ್ನು ರಕ್ಷಿಸುವಬಗ್ಗೆ ಹಾಗೂ ಕೊರೊನಾ ಕುರಿತ ಮುಂಜಾಗ್ರತೆಗಳ ಬಗ್ಗೆ ಈ ಕೃತಿಯಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ .

ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪಾಂಡುರಂಗ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೊರಬದ ಮಲ್ಲಿಕಾರ್ಜುನ್ , ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ ಚಂದ್ರಶೇಖರ್, ಡಾ. ಪ್ರಸನ್ನ ಹೆಗಡೆ, ಸಮಾಜ ಸೇವಕ ರಘುರಾಂ ವಾಜಪೇಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: