ಮೈಸೂರು

ಸಿದ್ದರಾಮಯ್ಯನವರಿಗೆ ತವರು ಜಿಲ್ಲೆಯಲ್ಲೇ ಸೋಲಿನ ಭೀತಿ : ಸಿ.ಟಿ.ರವಿ ವ್ಯಂಗ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಮ್ಮ ತವರು ಜಿಲ್ಲೆಯಲ್ಲೇ ನಡೆಯುವ ಉಪಚುನಾವಣೆಯಲ್ಲಿ ಸೋಲಿನ ಭೀತಿ ಕಾಡುತ್ತಿದೆ.  ಅದರಿಂದ ಹತಾಶೆಗೆ ಒಳಗಾಗಿದ್ದಾರೆ ಎಂದು ಬಿಜೆಪಿ ಮುಖಂಡ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ನಂಜನಗೂಡು ಮತ್ತು ಗುಂಡ್ಲುಪೇಟೆಯ ಎರಡೂ ಭಾಗಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆಗೆ ತೆರಳಿದಾಗ ಭಾರತೀಯ ಜನತಾಪಕ್ಷದತ್ತಲೇ ಜನರ ಹೆಚ್ಚಿನ ಒಲವಿರುವುದು ಕಂಡು ಬಂತು.  ಅದರಿಂದ  ನಾವು ಎರಡು ಕ್ಷೇತ್ರದಲ್ಲಿಯೂ ಗೆಲುವು ಸಾಧಿಸುತ್ತೇವೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 20 ಸಚಿವರು ಹಾಗೂ ಶಾಸಕರು ಸೇರಿದಂತೆ ತಳಮಟ್ಟದ ಕಾಂಗ್ರೆಸ್ ನಾಯಕರನ್ನು ಎರಡು ಕ್ಷೇತ್ರದಲ್ಲಿ ಹಣ ಹಂಚಲು ಬಿಟ್ಟು ಶತಾಯ ಗತಾಯ ಈ ಚುನಾವಣೆಯನ್ನು ಗೆಲ್ಲಲೇಬೇಕೆಂದು ಪಣತೊಟ್ಟಿದ್ದು, ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಿಂತು ಗೆಲುವು ಸಾಧಿಸಿ ತಮ್ಮ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ ಎಂದರು. ಈ ಉಪಚುನಾವಣೆಯು ಜಾತೀವಾದಿಗಳ ಮತ್ತು ರಾಷ್ಟ್ರವಾದಿಗಳ ಚುನಾವಣೆಯಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ  ಜಿಲ್ಲಾ ಪಂಚಾಯತ್ ಸದಸ್ಯ ಗುರುಸ್ವಾಮಿ, ನಿಜಗುಣರಾಜು, ಬಸವಪ್ಪ ಕೇಬೆಪುರ, ಪ್ರಭಾಕರ್ ಶಿಂಧೆ ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: