ಮೈಸೂರು

ಮಹಾರಾಣಿ ಮಾದರಿ ಶಾಲೆಯಲ್ಲಿ ಶತಕದತ್ತ ಮಕ್ಕಳ ದಾಖಲಾತಿ

ಮೈಸೂರು,ಅ.18:- ಕೇವಲ ಹನ್ನೊಂದು ಮಕ್ಕಳಿದ್ದಾರೆ ಎಂದು ಹೇಳಿ ಮಹಾರಾಣಿ ಮಾದರಿ ಶಾಲೆಯ ಸಮಾಧಿಯ ಮೇಲೆ ವಿವೇಕ ಸ್ಮಾರಕ ನಿರ್ಮಿಸಲು ರಾಮಕೃಷ್ಣಾಶ್ರಮದವರು ಮುಂದಾಗಿದ್ದರು.
ಇದೀಗ ಸದರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಶತಕದತ್ತ ಸಾಗಿದೆ. ಈ ವರ್ಷ ಅಂದರೆ 2020-21ನೇ ಸಾಲಿನಲ್ಲಿ ಶಾಲೆ ಆರಂಭವಾಗುವುದಕ್ಕೆ ಮೊದಲೇ 75 ಕ್ಕೂ ಹೆಚ್ಚು ಮಕ್ಕಳು ಅಧಿಕೃತವಾಗಿ ದಾಖಲಾಗಿದ್ದಾರೆ. ಮಕ್ಕಳ ಸಂಖ್ಯೆ ಆಧರಿಸಿ ಶಾಲೆಗೆ ಇನ್ನೋರ್ವ ಶಿಕ್ಷಕರನ್ನು ಕೊಡಲು ಶಿಕ್ಷಣ ಇಲಾಖೆ ಅಧಿಕಾರಿಗಳು ಮೌಖಿಕವಾಗಿ ಒಪ್ಪಿದ್ದಾರೆ. ಶಾಲೆ ಆರಂಭವಾಗುವುದು ಖಚಿತವಾದರೆ ಆ ಸಂಖ್ಯೆ ನೂರನ್ನು ತಲುಪಲಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಶಾಲೆಯನ್ನು ಹಾಗೆಯೇ ಉಳಿಸಿ ಉಳಿದ ಜಾಗದಲ್ಲಿ ವಿವೇಕ ಸ್ಮಾರಕ ನಿರ್ಮಿಸಬೇಕೆಂದು ಆದೇಶ ಕೊಟ್ಟಿರುವುದು ಅತ್ಯಂತ ವಿವೇಕಯುತವಾದ ನಿರ್ಧಾರವಾಗಿದೆ. ಪ್ರಾದೇಶಿಕ ಇತಿಹಾಸವನ್ನು ಮಾನ್ಯ ಮಾಡಿ ರಾಷ್ಟ್ರೀಯತೆಯ ಕಾರಣಕ್ಕೂ ಸ್ಪಂದಿಸುವ ಅತ್ಯಂತ ವಿವೇಕಯುತವಾದ ನಿರ್ಧಾರವನ್ನು ತಳೆದಿರುವ ಮುಖ್ಯಮಂತ್ರಿಗಳು ದಸರೆ ಕಳೆದ ಕೂಡಲೇ ಅಧಿಕೃತವಾಗಿ ತಮ್ಮ ಆದೇಶವನ್ನು ಜಾರಿಗೆ ಕೊಡಲು ಮುಂದಾಗಬೇಕೆಂದು ಮಹಾರಾಣಿ ಮಾದರಿ ಶಾಲೆ ಹೋರಾಟ ಸಮಿತಿ ಒತ್ತಾಯಿಸುತ್ತದೆ

ರಾಮಕೃಷ್ಣ ಆಶ್ರಮದವರಿಗೆ ನೆಲದಾಹದ ಬದಲು, ವಿವೇಕಾನಂದರ ಸ್ಮಾರಕ ನಿರ್ಮಿಸುವ ಬಗ್ಗೆ ಕಾಳಜಿ ಇದ್ದರೆ ಎರಡಂತಸ್ತು ಹೆಚ್ಚಿಸಿ ಮುಖ್ಯಮಂತ್ರಿಯವರ ಆದೇಶಕ್ಕೂ ಗೌರವ ಕೊಡಬಹುದಾಗಿದೆ.

ಮುಖ್ಯಮಂತ್ರಿ ಅವರ ಆದೇಶದ ಬಗ್ಗೆ ಸೌಹಾರ್ದಯುತ ಇತ್ಯರ್ಥಕ್ಕಾಗಿ ಸಭೆ ಕರೆಯಲು ನ್ಯಾಯಾಲಯದ ಕಲಾಪವನ್ನು ಮುಂದೂಡಬೇಕೆಂದು ರಾಜ್ಯಸರ್ಕಾರದ ವಕೀಲರ ಮನವಿಗೆ ಉಚ್ಛ ನ್ಯಾಯಾಲಯ ಒಪ್ಪಿ ಕಲಾಪವನ್ನು ನಾಲ್ಕು ಉಚ್ಛ ನ್ಯಾಯಾಲಯ ವಾರ ಮುಂದೂಡಿದ್ದರೂ ಆಶ್ರಮದವರು ನ್ಯಾಯಾಲಯ ದಲ್ಲಿ ಅಂತಹ ಆದೇಶ ಆಗಿಲ್ಲವೆಂದು ಸುಳ್ಳು ಹೇಳಿ ಜಿಲ್ಲಾಧಿಕಾರಿಗಳು ಕರೆದಿದ್ದ ಸೌಹಾರ್ದಯುತ ಸಭೆಗೆ ಗೈರು ಹಾಜರಾಗಿದ್ದು ಹಠಮಾರಿತನದ ದ್ಯೋತಕವಾಗಿದೆ ಎಂದು ಶಾಲಾ ಹೋರಾಟ ಸಮಿತಿ ಸದಸ್ಯರಾದ ಸ.ರ.ಸುದರ್ಶನ, ಅರವಿಂದ ಶರ್ಮಾ, ಬಿ ಕರುಣಾಕರ್ ಮತ್ತಿತರರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: