ಮೈಸೂರು

ಪಟ್ಟದ ಆನೆ-ಕುದುರೆಗೆ ಪೂಜೆ : 2ನೇ ದಿನವೂ ನಡೆದ ಖಾಸಗಿ ದರ್ಬಾರ್

ಮೈಸೂರು,ಅ.18- ವಿಶ್ವ-ವಿಖ್ಯಾತ ಮೈಸೂರು ದಸರಾ ಮಹೋತ್ಸವ ಎರಡನೇ ದಿನವಾದ ಇಂದು
ಅರಮನೆಯಲ್ಲಿ ಪಟ್ಟದ ಆನೆ, ಕುದುರೆ ಮತ್ತು ಹಸುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಅರಮನೆಯ ಆಗ್ನೇಯ ದಿಕ್ಕಿನಲ್ಲಿರುವ ಕೋಡಿ ಸೋಮೇಶ್ವರ ದೇವಾಲಯಕ್ಕೆ ಮಂಗಳ ವಾದ್ಯಗಳೊಂದಿಗೆ ತೆರಳಿ ಪಟ್ಟದ ಆನೆ ಮೇಲೆ ಚಾಮುಂಡೇಶ್ವರಿ ವಾಹನ ಸಿಂಹದ ಪ್ರತಿರೂಪವನ್ನು ಇರಿಸಿ, ಪೂಜೆ ಸಲ್ಲಿಸಲಾಯಿತು.
ಪ್ರತಿ ವರ್ಷವೂ ದಸರಾ ಸಂದರ್ಭದಲ್ಲಿ ಈ ಪೂಜೆ ನಡೆಸುವುದು ಸಂಪ್ರದಾಯವಾಗಿದೆ. ಅರಮನೆ ಒಳಗೆ ಖಾಸಗಿ ದರ್ಬಾರ್ ಸಹ ನಡೆಯುತ್ತಿದ್ದು, 2ನೇ ದಿನವಾದ ಇಂದು ನವರಾತ್ರಿ ಪ್ರಯುಕ್ತ ನಡೆಯುವ ವಿವಿಧ ಪೂಜಾ-ವಿಧಿ ವಿಧಾನಗಳು ಸಹ ಜರುಗುತ್ತಿವೆ.
ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ನೇತೃತ್ವದಲ್ಲಿ ಈ ಪೂಜಾ ಕಾರ್ಯಗಳು ನಡೆಯುತ್ತಿದ್ದು, ಸಾರ್ವಜನಕರಿ ಹಾಗೂ ಮಾಧ್ಯಮದವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: