ಮೈಸೂರು

ಬೈಕ್ ಮತ್ತು ಬುಲೆರೋ ವಾಹನ ನಡುವೆ ಡಿಕ್ಕಿ : ಇಬ್ಬರು ಸಾವು

ಮೈಸೂರು,ಅ.18″- ಬೈಕ್ ಮತ್ತು ಬುಲೆರೋ ವಾಹನದ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಂಜನಗೂಡು ತಾಲೂಕು ಎಲ್ಚಗೆರೆ ಬೋರೆ ಬಳಿ ನಡೆದಿದೆ.
ಎಲ್ಚಗೆರೆ ಬೋರೆ ಬಳಿ ಇಂದು ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು, ಸ್ಥಳೀಯ ಕೂಡ್ಲಾಪುರ ನಿವಾಸಿಗಳಾದ ನಾಗರಾಜು (32) ಮತ್ತು ಪುಟ್ಟಸ್ವಾಮಿ (52) ಎಂಬವರು ಮೃತಪಟ್ಟಿದ್ದಾರೆ.
ಕೂಡ್ಲಾಪುರದಿಂದ ಬೇಗೂರಿಗೆ ತಮ್ಮ ಬೈಕ್ ನಲ್ಲಿ ಇವರಿಬ್ಬರೂ ತೆರಳುತ್ತಿದ್ದ ವೇಳೆ, ಕೇರಳ ಕಡೆಯಿಂದ ಬರುತ್ತಿದ್ದ ಬುಲೆರೋ ವಾಹನ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಗರಾಜು ಮತ್ತು ಪುಟ್ಟಸ್ವಾಮಿ ಸಾವನ್ನಪ್ಪಿದ್ದಾರೆ. ಬುಲೆರೋ ಗಾಡಿ ಓಡಿಸುತ್ತಿದ್ದ ಕೇರಳ ವ್ಯಕ್ತಿಗಳಾದ ಸುದೀ ಮತ್ತು ಅನೀಶ್ ಅವರಿಗೆ ಹೆಚ್ಚಿನ ಗಾಯಗಳಾಗಿರುವುದು ರಿಂದ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸ್ಥಳಕ್ಕೆ ಡಿವೈಎಸ್ಪಿ ಪ್ರಭಾಕರ್ ಶಿಂಧೆ, ಸಂಚಾರಿ ವೃತ್ತ ನಿರೀಕ್ಷಕರಾದ ಜಯಲಕ್ಷ್ಮಿ, ಸಬ್‍ ಇನ್ಸ್ಪೆಕ್ಟರ್ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: