ಮೈಸೂರು

ಉದ್ಭೂರು ಗ್ರಾಮದಲ್ಲಿ ಹೊಸ ಬಡಾವಣೆ ನಿರ್ಮಿಸುವ ಸಂಬಂಧ ಸಭೆ

ಮೈಸೂರು,ಅ.18:- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್ ವಿ ರಾಜೀವ್ ಅವರು ಇಂದು ಉದ್ಬೂರು ಗ್ರಾಮದಲ್ಲಿ ರೈತರು ಹಾಗೂ ಮುಖಂಡರೊಂದಿಗೆ ಶೇಕಡ 50:50 ರ ಅನುಪಾತದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹೊಸ ಬಡಾವಣೆಯನ್ನು ನಿರ್ಮಿಸುವ ಸಂಬಂಧ ಸಭೆಯನ್ನು ನಡೆಸಿದರು.
ಸಭೆಯಲ್ಲಿ ಹೆಚ್.ವಿ.ರಾಜೀವ್ ಮಾತನಾಡಿ ಮೈಸೂರಿನ ಇತರೆ ಭಾಗಗಳಿಗೆ ಹೋಲಿಸಿದಾಗ, ಹೆಚ್ ಡಿ ಕೋಟೆ ರಸ್ತೆ ಸಂಪಕ೯ ಕಲ್ಪಿಸುವ ಈ ಭಾಗವು ಅಭಿವೃದ್ಧಿಯಲ್ಲಿ ಹಿಂದಿರುವುದನ್ನು ಮನಗಂಡು ಈ ಭಾಗದಲ್ಲಿ ಹೊಸ ಬಡಾವಣೆಯನ್ನು ನಿರ್ಮಿಸುವುದರಿಂದ ಸುತ್ತಮುತ್ತಲ ಜನರಿಗೆ ಎಲ್ಲಾ ರೀತಿಯ ಅನುಕೂಲವಾಗುವುದು ಹಾಗೂ ಬಡಾವಣೆಗೆ ಜಮೀನು ನೀಡಿದ ಗ್ರಾಮಗಳನ್ನು ಪ್ರಾಧಿಕಾರದಿಂದ ಸವ೯ತೋಮುಖವಾಗಿ ಅಭಿವೃದ್ಧಿ ಮಾಡಲಾಗುವುದೆಂದು ಎಂದು ತಿಳಿಸಿದರು, ಈ ನಿಟ್ಟಿನಲ್ಲಿ ರೈತರೊಂದಿಗೆ ಚಚಿ೯ಸಲು ಪ್ರಾಧಿಕಾರದ ಅಧಿಕಾರಿಗಳು ಆಗಮಿಸಿದ್ದಾರೆಂದು ತಿಳಿಸಿದರು. ಸಭೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ ನಟೇಶ್ ಹಾಗೂ ಅಧೀಕ್ಷಕ ಅಭಿಯಂತರರಾದ ಶಂಕರ್ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: