ಪ್ರಮುಖ ಸುದ್ದಿಮನರಂಜನೆ

ಕನ್ನಡ ಧಾರವಾಹಿಯ ಖ್ಯಾತ ಪೋಷಕ ನಟ ಕೃಷ್ಣ ನಾಡಿಗ್ ಇನ್ನಿಲ್ಲ

ರಾಜ್ಯ(ಬೆಂಗಳೂರು)ಅ.18:- ಕನ್ನಡ ಧಾರವಾಹಿಯ ಖ್ಯಾತ
ಪೋಷಕ ನಟ ಕೃಷ್ಣ ನಾಡಿಗ್ ಅವರು ವಿಧಿವಶರಾಗಿದ್ದಾರೆ.
ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಕೃಷ್ಣ ನಾಡಿಗ್ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತ್ದೆತು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆಂದು ವರದಿಗಳು ತಿಳಿಸಿವೆ.

ಕೃಷ್ಣ ನಾಡಿಗ್ ಅವರು ಧಾರಾವಾಹಿಗಳಷ್ಟೇ ಅಲ್ಲದೆ ಸಿನಿಮಾಗಳಲ್ಲಿಯೂ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಸೃಜನ್ ಲೋಕೆಶ್ ನಿರ್ಮಾಣದ ಇವಳು ಸುಜಾತಾ, ಮಿಲನ, ದೇವಿ, ಪಾರು ಮುಂತಾದ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದರು. ಪೈಲ್ವಾನ್, ಆದಿ ಲಕ್ಷ್ಮಿ ಪುರಾಣ ಹಾಗೂ ಇತರೆ ಸಾಕಷ್ಟು ಸಿನಿಮಾಗಳಲ್ಲೂ ನಟಿಸಿದ್ದರು.

ನಾಡಿಗ್ ಚಿಕ್ಕಮಗಳೂರು ಮೂಲದವರಾಗಿದ್ದು, ನಾಟಕಗಳ ಬಗ್ಗೆ ವಿಶೇಷ ಆಸಕ್ತಿ ಇಟ್ಟುಕೊಂಡ ಇವರು ಪುಟ್ಟಣ್ಣ ಕಣಗಾಲ್ ಸಿನಿಮಾಗಳನ್ನು ನೋಡಿ ನಿರ್ದೇಶಕನಾಗುವ ಕನಸು ಹೊತ್ತಿದ್ದರು. ಆದರೆ ಅವರ ಕನಸು ನನಸಾಗದೇ ಕೊನೆಗೆ ನಟರಾಗಿ ಜನರ ಮನಗೆದ್ದಿದ್ದರು. (ಎಸ್.ಎಚ್)

Leave a Reply

comments

Related Articles

error: