ಪ್ರಮುಖ ಸುದ್ದಿಮೈಸೂರು

ಅರಮನೆ ಆವರಣದಲ್ಲಿ ಮನಸೂರೆಗೊಂಡ ಕೊಳಲು ವಾದನ

ಮೈಸೂರು,ಅ.18:- ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮದ ಎರಡನೇ ದಿನವಾದ ಭಾನುವಾರ ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯಂ ಮತ್ತು ತಂಡದವರ ಸುಶ್ರಾವ್ಯವಾದ ಕೊಳಲುವಾದನವು ಸಭಿಕರ ಮನಸೂರೆಗೊಳಿತು.
ಮೊದಲಿಗೆ ಆದಿತಾಳದ ರಾಗಹಂಸನಾದ ಮ‌ೂಲಕ ಕಾರ್ಯಕ್ರಮ ಪ್ರಾರಂಭಿಸಿದರು. ನಂತರ ರಾಗಗೌಡಮಲ್ಹಾರ್ ರಾಗದಲ್ಲಿ ಸಾರಸಮುಖಿ ಎಂಬ ಅಪರೂಪದ ಕೃತಿಯನ್ನು ಕೇಳುಗರ ಮನಗೆಲ್ಲುವಂತೆ ಪ್ರಸ್ತುತ ಪಡಿಸಿದರು.
ನಂತರ ಪೂರ್ವಿ ಕಲ್ಯಾಣಿ ರಾಗದಲ್ಲಿ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಮೀನಾಕ್ಷಿ ಮೇಮುದಂದೇಹಿ ಎಂಬ ವಿಶೇಷವಾದ ಕೃತಿಯನ್ನು ಸುಮಧುರವಾಗಿ ನುಡಿಸಿದರು‌. ಇದಲ್ಲದೆ ಕೆಲವು ಪ್ರಸಿದ್ಧ ದೇವರ ನಾಮಗಳನ್ನು ಪ್ರೇಕ್ಷಕರು ತಲೆದೂಗುವಂತೆ ನುಡಿಸಿದರು.
ಪೀಟಿಲಿನಲ್ಲಿ ವಿದ್ವಾನ್ ಎಚ್.ಎನ್.ಭಾಸ್ಕರ್, ಮೃದಂಗದಲ್ಲಿ ವಿದ್ವಾನ್ ಫಾರುಪಲ್ಲಿ ಫಲ್ಗುಣ್, ವಿದ್ವಾನ್ ತಬಲವನ್ನು ರಾಜೇಂದ್ರ ನಾಕೋಡ್ ಅವರು ಸಾಥ್ ನೀಡಿದರು.
ಕಾರ್ಯಕ್ರಮವನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಎ.ರಾಮದಾಸ್, ಮುಡಾ ಅಧ್ಯಕ್ಷ ಎಚ್.ವಿ‌.ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥ್‌ಸ್ವಾಮಿ, ಮುಡಾ ಆಯುಕ್ತ ಡಿ.ಬಿ.ನಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್. ಚನ್ನಪ್ಪ ಅವರು ಸೇರಿದಂತೆ ಇನ್ನಿತರ ಅತಿಥಿ ಗಣ್ಯರ ಅರಮನೆ ಮೈದಾನದಲ್ಲಿ ಉಪಸ್ಥಿತರಿದ್ದು ಆಲಿಸಿದರು. (ಕೆ.ಎಸ್,ಎಸ್.ಎಸ್)

Leave a Reply

comments

Related Articles

error: