ಮೈಸೂರು

ಮತದಾರರು ಯಾರಿಗೂ ಗುತ್ತಿಗೆದಾರರಾಗಿಲ್ಲ : ಡಾ.ಹೆಚ್.ಸಿ.ಮಹದೇವಪ್ಪ

ಮತದಾರರು  ಯಾರಿಗೂ ಗುತ್ತಿಗೆದಾರರಾಗಿಲ್ಲ. ಅವರು ವಿದ್ಯಾವಂತರಾಗಿದ್ದಾರೆ ಅಭಿವೃದ್ಧಿ ಯನ್ನು ತಿಳಿದು ಮತ ಚಲಾಯಿಸುವಷ್ಟು ಬುದ್ದಿವಂತರಾಗಿದ್ದಾರೆ  ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಹೇಳಿದರು.

ಮೈಸೂರಿನ  ಖಾಸಗಿ  ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಪ್ರತಿಯೊಂದು ಸಮುದಾಯವು ವಿದ್ಯಾವಂತರನ್ನು ಹೊಂದಿದ್ದು ಅವರು ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯವನ್ನು ಕಂಡು ಎರಡೂ ಕ್ಷೇತ್ರದ ಜನತೆ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚು ಮತ ನೀಡುವುದರ ಮೂಲಕ  ಆಯ್ಕೆ ಮಾಡುತ್ತಾರೆ ಎಂದು ಹೇಳಿದರು. ಅಲ್ಲದೆ ಶ್ರೀನಿವಾಸ್ ಪ್ರಸಾದ್ ರವರು ತಮ್ಮ  ಅಧಿಕಾರದ ದಾಹಕ್ಕಾಗಿ ಈ ನಂಜನಗೂಡು ಉಪಚುನಾವಣೆ ನಡೆಯುತ್ತಿದೆ ಎಂದರು. ಬಿಜೆಪಿಯವರು  ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುತ್ತಿದ್ದಾರೆ  ಎಂದು ತಿಳಿಸಿದರು.
ಈ ನಾಡಿನಲ್ಲಿ ಬುದ್ಧ, ಬಸವರ ನೀತಿ ಮಾರ್ಗದಲ್ಲಿ ನಡೆಯಲು ಬಜನರು ಬಿಡುವುದಿಲ್ಲ, ಆದರೆ ಕೋಮುವಾದಕ್ಕೆ ಹೆಚ್ಚು ಬೆಲೆ ಕೂಡುತ್ತಾರೆ  ಎಂದು ನುಡಿದರು.

ಸುದ್ದಿಗೋಷ್ಠಿಯಲ್ಲಿ  ಮೈಲಾಕ್ ಅಧ್ಯಕ್ಷ ವೆಂಕಟೇಶ್ ಇದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: