ಮೈಸೂರು

ಸುರಿದ ಭಾರೀ ಮಳೆ ಗಾಳಿಗೆ ಹಾರಿ ಹೋಗಿವೆ ಹೆಂಚುಗಳು

ಬೈಲಕುಪ್ಪೆ :  ಗ್ರಾಮದ ಸುತ್ತ-ಮುತ್ತ ಗುರುವಾರ ರಾತ್ರಿ ಬಿದ್ದ ಗಾಳಿ ಸಹಿತ ಮಳೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಮನೆಗಳಿಗೆ ಹಾನಿಯಾಗಿದೆ.
ತಾಲೂಕಿನ ಐಲಾಪುರ ಗ್ರಾಮದ ಶೀಥಲ್, ಜಯರಾಮ, ಬಾಬು ಎಂಬುವವರಿಗೆ ಸೇರಿದ ಮನೆಗಳ ಹೆಂಚು ಮತ್ತು ಕಲ್ನಾರ್ ಶೀಟ್‍ಗಳು ಹಾರಿಹೋಗಿದೆ.
ತಾಲೂಕಿನ ಬೈಲಕುಪ್ಪೆ ಸುತ್ತಮುತ್ತಲಿನ ಕೆಲವು ಗ್ರಾಮಗಳಲ್ಲಿ ಸಿಡಿಲಿಗೆ ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಟಿ.ವಿ. ಫ್ಯಾನ್ ಸೇರಿದಂತೆ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ.
ಸುತ್ತಮುತ್ತ ಗ್ರಾಮಗಳಲ್ಲಿ ಗಾಳಿ, ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ, ಗುರುವಾರ ರಾತ್ರಿ  10ಗಂಟೆಗೆ ಆರಂಭವಾದ ಮಳೆಯು 12 ಘಂಟೆಯವರೆಗೂ ಧಾರಕಾರವಾಗಿ ಸುರಿದಿದ್ದು, ಬಿಸಿಲ ಬೇಗೆಯಿಂದ  ತತ್ತರಿಸಿದ್ದ ಜನ, ಜಾನುವಾರುಗಳಿಗೆ ತಂಪೆರೆದಿದೆ. ಬರದ ಕಾರಣ ಕುಡಿಯುವ ನೀರಿಗೂ ಪರಿತಪಿಸುವಂತಾಗಿತ್ತು, ಗುರುವಾರ ಸುರಿದ ಮಳೆಯಿಂದಾಗಿ ಜಾನುವಾರುಗಳಿಗೂ ಅಲ್ಪಸ್ವಲ್ಪ ಕುಡಿಯಲು ನೀರು ಸಂಗ್ರಹವಾಗಿದೆ. (ಆರ್.ಬಿ.ಆರ್-ಎಸ್.ಎಚ್)

Leave a Reply

comments

Related Articles

error: