ಮೈಸೂರು

ಸಾಲ ನೀಡುವ ಸಂಘ ಸಂಸ್ಥೆಗಳಿಂದ ಮಹಿಳೆಯರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಅ.19:- ಮೈಕ್ರೋ ಫೈನಾನ್ಸ್ ಮತ್ತು ಸಾಲ ನೀಡುವ ಸಂಘ ಸಂಸ್ಥೆಗಳಿಂದ ಮಹಿಳೆಯರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಮಹಿಳಾ ಪರಿಷದ್ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಸುಮಾರು 6ತಿಂಗಳಿನಿಂದ ಕೊರೋನಾ ಮಹಾಮಾರಿ ಕಾಯಿಲೆ ಬಂದು ಯಾವುದೇ ವ್ಯವಹಾರ ಹಾಗೂ ಕೂಲಿ ಕೆಲಸಗಳು ಇಲ್ಲದೆ ತುಂಬಾ ತೊಂದರೆಯನ್ನು ಮಹಿಳೆಯರು ಅನುಭವಿಸುತ್ತಿದ್ದಾರೆ. ಇವರುಗಳಿಗೆ ಮೈಕ್ರೋಫೈನಾನ್ಸ್ ಹಾಗೂ ಸಂಘಸಂಸ್ಥೆಗಳು ಸಾಲ ಮತ್ತು ಅದಕ್ಕೆ ತಗಲುವ ಬಡ್ಡಿಯನ್ನು ಪಾವತಿಸುವಂತೆ ಮಾನಸಿಕವಾಗಿ ಹಿಂಸೆಯನ್ನು ನೀಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಈಗಾಗಲೇ ಮೈಕ್ರೋ ಫೈನಾನ್ಸ್ ನವರ ಹಾವಳಿಗಳು ಹೆಚ್ಚಾಗಿರುವುದರಿಂದ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಉದ್ಭವವಾಗುತ್ತಿದೆ. ದಯಮಾಡಿ ಮೈಕ್ರೋಫೈನಾನ್ಸ್ ಹಾಗೂ ಸಂಘಸಂಸ್ಥೆಗಳು ಮಹಿಳೆಯರಿಗೆ ತೊಂದರೆ, ಹಿಂಸೆ,ಕಿರುಕುಳ ನೀಡುವುದನ್ನು ತಪ್ಪಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮೈಕ್ರೋ ಫೈನಾನ್ಸ್ ಸಂಸ್ಥೆಗಳವರಿಗೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರಲ್ಲದೆ, ಸಾಲದ ಬಾಬ್ತು ಹಣವನ್ನು ಮನ್ನಾ ಮಾಡುವುದು ಅಥವಾ ಸಾಲಪಾವತಿಗೆ ಕಾಲಾವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷೆ ಶ್ವೇತಾ ಶೇಖರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: